Urdu   /   English   /   Nawayathi

ಕೊರೋನಾ ಆತಂಕದ ನಡುವೆ ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಿಂದ ಪ್ರತಿಭಟನೆ: ಅಪಾರ ಸಂಖ್ಯೆಯಲ್ಲಿ ಜನಸ್ತೋಮ

share with us

ಕಾರವಾರ: 29 ಜೂನ್ 2020 (ಫಿಕ್ರೋಖಬರ್ ಸುದ್ದಿ) ಕೊರೋನಾ ಪಾಸಿಟಿವ್ ದೃಢಪಟ್ಟ ಮೂವರು ಪುತ್ರರು ಮತ್ತು ಅನಾರೋಗ್ಯದಿಂದ ಬಳಲುತ್ತಿರುವ 90 ವರ್ಷದ ವೃದ್ಧ ತಾಯಿಯ ಕರುಣಾಜನಕ ಕಥೆ ಇದು. ಕಾರವಾರದಲ್ಲಿ ಮೂವರು ಮಕ್ಕಳಿಗೆ ಕೊರೋನಾ ಪಾಸಿಟಿವ್ ಬಂದ ನಂತರ, ಅಧಿಕಾರಿಗಳು ಆ ಮೂರು ಮಕ್ಕಳನ್ನು ನಿಗದಿತ ಕೊವಿಡ್-19 ಆಸ್ಪತ್ರೆಗೆ ಶಿಫ್ಟ್ ಮಾಡಲು ಮುಂದಾದರು. ಆದರೆ ಈ ಮೂವರು ಮಕ್ಕಳನ್ನು ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ತಾಯಿಗೆ ನಿರಂತರ ಆರೈಕೆಯ ಅಗತ್ಯವಿರುವುದರಿಂದ ನಾವು ತಾಯಿಯನ್ನು ಮನೆಯಲ್ಲಿ ಒಂಟಿಯಾಗಿ ಬಿಟ್ಟು ಆಸ್ಪತ್ರೆಗೆ ಬರಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದರು. ಮಕ್ಕಳ ಕಾಳಜಿಯನ್ನು ಗಮನಿಸಿದ ಅಧಿಕಾರಿಗಳು, ಅವರ ಮನವಿ ಮೇರೆಗೆ ಸೋಂಕಿತ ಮಕ್ಕಳು ಮತ್ತು ಅವರ ತಾಯಿಯನ್ನೂ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಆದರೆ ತಾಯಿಗೆ ಕೊರೋನಾ ನೆಗಟಿವ್ ಬಂದಿದ್ದರಿಂದ ಅವರಿಗೆ ಪ್ರತ್ಯೇಕ ವಾರ್ಡ್ ನೀಡಿದ್ದಾರೆ. ಏಳು ದಿನಗಳ ನಂತರ ಈ ಮೂವರು ಮಕ್ಕಳು ಕೊರೋನಾದಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿ, ತಾಯಿಯೊಂದಿಗೆ ಮನೆಗೆ ಬಂದಿದ್ದಾರೆ. 96 ವರ್ಷದ ಮಹಿಳೆ ಕಾರವಾರ ಬಳಿಯ ಸದಾಶಿವ್‌ಘಾದ್‌ನಲ್ಲಿ ವಾಸಿಸುತ್ತಿದ್ದರೆ, ಪುತ್ರರು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಇತ್ತೀಚೆಗೆ ತಮ್ಮ ಊರಿಗೆ ಮರಳಿದ ನಂತರ, ಮೂವರಿಗೂ ಕೊರೋನಾ ಪಾಸಿಟಿವ್ ಬಂದಿತ್ತು. ಆದರೆ ಅವರು ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿದರು. ಅಧಿಕಾರಿಗಳು ವಿಚಾರಿಸಿದಾಗ, ಪುತ್ರರು ತಮ್ಮ ವೃದ್ಧ ತಾಯಿಯನ್ನು ಮನೆಯಲ್ಲಿಯೇ ಬಿಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಅವಳನ್ನು ನೋಡಿಕೊಳ್ಳಲು ನಮ್ಮ ಬಿಟ್ಟು ಬೇರೆ ಯಾರೂ ಇಲ್ಲ ಎಂದಿದ್ದಾರೆ. ಈ ಕುರಿತು ನಾವು ಕಾರವಾರ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದೆವು. ಅವರು ಸಹ ವಯಸ್ಸಾದ ತಾಯಿಗೆ ಸೋಂಕು ತಗುಲಿದರೆ ಹೆಚ್ಚು ಅಪಾಯ. ಹೀಗಾಗಿ ಅವರನ್ನು ಮನೆಯಲ್ಲಿ ಬಿಟ್ಟು ನೀವು ಆಸ್ಪತ್ರೆದೆ ದಾಖಲಾಗಿ ಎಂದು ಮನವರಿಕೆ ಮಾಡಲು ಯತ್ನಿಸಿದರು. ಆದರೆ ಅವರು ಒಪ್ಪಿಕೊಳ್ಳದಿದ್ದಾಗ, ಅವರ ಒಪ್ಪಿಗೆ ಮೇರೆಗೆ ತಾಯಿನ್ನು ಮಕ್ಕಳು ಇರುವ ಸಮೀಪದ ವಾರ್ಡ್ ನಲ್ಲಿರಿಸುವ ವ್ಯವಸ್ಥೆ ಮಾಡಲಾಯಿತು ಮತ್ತು ಯಾವುದೇ ಸೋಂಕಿತರು ವೃದ್ಧೆಯ ಸಂಪರ್ಕಕ್ಕೆ ಬರದಂತೆ ನೋಡಿಕೊಳ್ಳಲಾಯಿತು ಎಂದು ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಗಜಾನನ್ ನಾಯಕ್ ಅವರು ತಿಳಿಸಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا