Urdu   /   English   /   Nawayathi

ಪೊಲೀಸ್​ ಅಧಿಕಾರಿಗೆ ಕಾಲಿಂದ ಒದ್ದು ಮಾಜಿ ಸಂಸದನ ದರ್ಪ: ವಿಡಿಯೋ ವೈರಲ್​​

share with us

ತಮಿಳುನಾಡು: 29 ಜೂನ್ 2020 (ಫಿಕ್ರೋಖಬರ್ ಸುದ್ದಿ) ಕರ್ತವ್ಯ ನಿರತ ಪೊಲೀಸ್​ ಅಧಿಕಾರಿ ಮೇಲೆ ಮಾಜಿ ಸಂಸದ ಕೆ ಅರ್ಜುನನ್ ಹಲ್ಲೆ ನಡೆಸಿರುವ ಘಟನೆ ತಮಿಳುನಾಡಿನ ಸೇಲಂನಲ್ಲಿ ಭಾನುವಾರ ರಾತ್ರಿ ನಡೆದಿದೆ. ಕಾರಿನಲ್ಲಿ ಬಂದ ಅರ್ಜುನನ್ ಹತ್ತಿರ ಟೋಲ್ ಗೇಟ್‌ ಬಳಿ ಪೊಲೀಸರು ಇ-ಪಾಸ್ ತೋರಿಸುವಂತೆ ಕೇಳಿದ್ದಾರೆ. ಈ ವೇಳೆ ಪೊಲೀಸ್​ ಅಧಿಕಾರಿ ಹಾಗೂ ಅರ್ಜುನನ್ ನಡುವೆ ವಾಗ್ವಾದ ನಡೆದಿದೆ. ಘಟನೆಯ ವಿಡಿಯೋ ಮೊಬೈಲ್​ನಲ್ಲಿ ಸೆರೆಯಾಗಿದೆ. ಇದರಲ್ಲಿ ಪೊಲೀಸ್​ ಅಧಿಕಾರಿಗೆ ಅರ್ಜುನನ್ ಕಾಲಿನಿಂದ ಒದೆಯುವುದು, ಕೆಟ್ಟ ಪದಗಳಿಂದ ನಿಂದಿಸಿರುವುದು ಕಂಡುಬರುತ್ತದೆ. ಕೋಪಗೊಂಡ ಪೊಲೀಸ್ ಕೂಡ ಅರ್ಜುನನ್​​ರನ್ನು ತಳ್ಳಿರುವುದು ವಿಡಿಯೋದಲ್ಲಿ ರೆಕಾರ್ಡ್​ ಆಗಿದೆ. ತಮಿಳುನಾಡಿನಲ್ಲಿ ಕೋವಿಡ್​ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆ ಲಾಕ್​ಡೌನ್​ ಕ್ರಮಗಳನ್ನು ಬಿಗಿಗೊಳಿಸಲಾಗಿದ್ದು, ಒಂದು ನಗರದಿಂದ ಮತ್ತೊಂದು ನಗರಕ್ಕೆ ಪ್ರಯಾಣಿಸುವಾಗ ಇ - ಪಾಸ್ ಕಡ್ಡಾಯವಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا