Urdu   /   English   /   Nawayathi

ಅಸ್ಸಾಂನಲ್ಲಿ ಕಾಗದ ಕಾರ್ಖಾನೆಗಳು ಬಂದ್‍: ಸಾವಿನ ಸಂಖ್ಯೆ 67 ಕ್ಕೆ ಏರಿಕೆ

share with us

ಸಿಲ್ಚಾರ್: 28 ಜೂನ್ 2020 (ಫಿಕ್ರೋಖಬರ್ ಸುದ್ದಿ) ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಪೇಪರ್ ಕಾರ್ಪೊರೇಶನ್ ಲಿಮಿಟೆಡ್‌ನ ಕ್ಯಾಚರ್ ಪೇಪರ್ ಮಿಲ್ಸ್ ನ ಮತ್ತೊಬ್ಬ ಉದ್ಯೋಗಿ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಶನಿವಾರ ಮೃತಪಡುವುದರೊಂದಿಗೆ ಕಚಾರ್ ಮತ್ತು ನಾಗಾನ್ ಕಾಗದ ಕಾರ್ಖಾನೆ ನೌಕರರ ಸಾವಿನ ಸಂಖ್ಯೆ 67ಕ್ಕೇರಿದೆ. ಕಾಗದ ಕಾರ್ಖಾನೆಗಳನ್ನು ಕಳೆದ ಐದಾರು ವರ್ಷಗಳಿಂದ ಮುಚ್ಚಲಾಗಿದೆ.ಕಾರ್ಖಾನೆಯ ಪುನಶ್ಚೇತನ ಕ್ರಿಯಾ ಸಮಿತಿಯ ಮುಖ್ಯ ಸಂಚಾಲಕ ಮನಬೇಂದ್ರ ಚಕ್ರವರ್ತಿ ಮಾತನಾಡಿ, ಮಾನವ ಸಂಪನ್ಮೂಲ ವಿಭಾಗದ ಉದ್ಯೋಗಿ ಲಿಯಾಕತ್ ಅಲಿ (57) ಅವರು ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಹೇಳಿದ್ದಾರೆ. ಈ ಕಾಗದದ ಕಾರ್ಖಾನೆಯ ನೌಕರರು ಕಳೆದ 42 ತಿಂಗಳುಗಳಿಂದ ಸಂಬಳವಿಲ್ಲದೆ ಇದ್ದಾರೆ. ಎಚ್‌ಪಿಸಿ ಕ್ವಾರ್ಟರ್ಸ್‌ನಲ್ಲಿ ತಂಗಿದ್ದ ಅಲಿ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿದ್ದರು. ಆದರೆ, ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ವೈದ್ಯರನ್ನು ಭೇಟಿ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ಕೊನೆಗೆ ಅವರನ್ನು ಎಸ್‌ಎಂಸಿಎಚ್‌ಗೆ ದಾಖಲಿಸಲಾಯಿತು. ಆದರೆ, ಅನೇಕ ಕಾಯಿಲೆಗಳಿಗಳಿಂದ ಬಳಲುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕಾರ್ಮಿಕ ಒಕ್ಕೂಟದ ಸದ್ಯರು ಹೇಳಿದ್ದಾರೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا