Urdu   /   English   /   Nawayathi

ಉಡುಪಿ: 9 ಮಂದಿಗೆ ಕೋವಿಡ್‌ ದೃಢ

share with us

ಉಡುಪಿ: 27 ಜೂನ್ 2020 (ಫಿಕ್ರೋಖಬರ್ ಸುದ್ದಿ) ಜಿಲ್ಲೆಯಲ್ಲಿ ಶುಕ್ರವಾರ 9 ಮಂದಿಗೆ ಕೋವಿಡ್‌–19 ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದಿದ್ದ ಇಬ್ಬರಲ್ಲಿ, ಮಸ್ಕತ್‌, ಕತಾರ್‌, ಕೇರಳದಿಂದ ಬಂದಿದ್ದ ತಲಾ ಒಬ್ಬರಲ್ಲಿ, ಅಂತರ ಜಿಲ್ಲಾ ಪ್ರಯಾಣ ಬೆಳೆಸಿದ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಒಬ್ಬರ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. ಸೋಂಕಿತರಲ್ಲಿ 8 ಪುರುಷರು, ಒಬ್ಬರು ಮಹಿಳೆ ಇದ್ದು, ಎಲ್ಲರನ್ನೂ ಕೋವಿಡ್‌ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ‌

120 ಮಂದಿಯ ಮಾದರಿ ರವಾನೆ: ಕೊರೊನಾ ಲಕ್ಷಣ, ಸೋಂಕಿತರ ಪ್ರಾಥಮಿಕ ಸಂಪರ್ಕ, ಐಎಲ್‌ಐ ಲಕ್ಷಣಗಳಿದ್ದ 120 ಜನರ ಗಂಟಲ ದ್ರವದ ಮಾದರಿಯನ್ನು ಶುಕ್ರವಾರ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. ಇದುವರೆಗೂ 13,960 ಮಾದರಿಗಳನ್ನು ರವಾನಿಸಲಾಗಿದ್ದು, 12,483 ವರದಿ ನೆಗೆಟಿವ್, 1,125 ಪಾಸಿಟಿವ್‌ ಬಂದಿದ್ದು, 352 ವರದಿಗಳು ಬರುವುದು ಬಾಕಿ ಇದೆ. ಸೋಂಕಿನ ಲಕ್ಷಣಗಳಿದ್ದ 12 ಮಂದಿಗೆ ಐಸೊಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶುಕ್ರವಾರ 17 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು, 95 ಸಕ್ರಿಯ ಪ್ರಕರಣಗಳು ಇವೆ. ಇಬ್ಬರು ಕೋವಿಡ್‌ಗೆ ಮೃತಪಟ್ಟಿದ್ದಾರೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا