Urdu   /   English   /   Nawayathi

ಡೀಸೆಲ್ ದರದಲ್ಲಿ ದಾಖಲೆ ಏರಿಕೆ..!

share with us

ನವದೆಹಲಿ: 25 ಜೂನ್ 2020 (ಫಿಕ್ರೋಖಬರ್ ಸುದ್ದಿ) ಸಾರ್ವಜನಿಕರು, ವಿರೋಧ ಪಕ್ಷಗಳು ಮತ್ತು ವಿವಿಧ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ಪೆಟ್ರೋಲ್ ಮತ್ತು ಡೀಸೆಲ್ ದರ ಸತತ 19ನೆ ದಿನವೂ ಏರಿಕೆ ಕಂಡಿದೆ. ದೆಹಲಿಯಲ್ಲಿಂದು ಡೀಸೆಲ್ ದರದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಪ್ರತಿ ಲೀಟರ್‍ಗೆ ಡೀಸೆಲ್ ದರ 80ರೂ. 2 ಪೈಸೆ ನಿಗದಿಗೊಳಿಸಲಾಗಿದೆ. ನಿನ್ನೆಯಷ್ಟೆ ದೆಹಲಿಯಲ್ಲಿ ಪೆಟ್ರೋಲ್‍ಗಿಂತ ಡೀಸೆಲ್ ತುಟ್ಟಿಯಾಗಿತ್ತು. ಇಂದು ಡೀಸೆಲ್ ದರದಲ್ಲಿ ಹೊಸ ದಾಖಲೆ ಕಂಡುಬಂದಿದೆ. ಇದೇ ವೇಳೆ ಇಂದು ಪೆಟ್ರೋಲ್ ದರದಲ್ಲೂ 16 ಪೈಸೆಯಷ್ಟು ಹೆಚ್ಚಳ ಕಂಡುಬಂದಿದೆ. ನಿನ್ನೆ ಪೆಟ್ರೋಲ್ ದರ 79ರೂ. 76 ಪೈಸೆ ಇತ್ತು. ಇಂದು 16 ಪೈಸೆಯಷ್ಟು ಹೆಚ್ಚಿಸಿರುವುದರಿಂದ ಇಂದಿನ ದರ 79ರೂ., 92 ಪೈಸೆಗೆ ಏರಿಕೆಯಾಗಿದೆ. ಭೂಪಾಲ್ ವರದಿ: ಈ ನಡುವೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಮಧ್ಯಪ್ರದೇಶದ ರಾಜಧಾನಿ ಭೂಪಾಲ್‍ನಲ್ಲಿ ನಿಯಮ ಉಲ್ಲಂಘಿಸಿ ಸೈಕಲ್ ಯಾತ್ರೆ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಧುರೀಣ ದಿಗ್ವಿಜಯ್‍ಸಿಂಗ್ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا