Urdu   /   English   /   Nawayathi

ಕಾರ್ಖಾನೆಯಲ್ಲಿ ಭಾರಿ ಅಗ್ನಿ ಅವಘಡ: 24 ಅಗ್ನಿಶಾಮಕ ದಳದಿಂದ ಸತತ ಕಾರ್ಯಾಚರಣೆ

share with us

ಅಹಮದಾಬಾದ್‌(ಗುಜರಾತ್): 24 ಜೂನ್ 2020 (ಫಿಕ್ರೋಖಬರ್ ಸುದ್ದಿ) ಇಲ್ಲಿನ ಸಾನಂದ್ ಪ್ರದೇಶದಲ್ಲಿರುವ ಜಿಐಡಿಸಿ (ಗುಜರಾತ್ ಕೈಗಾರಿಕಾ ಅಭಿವೃದ್ಧಿ ನಿಗಮ) ಕಾರ್ಖಾನೆಯಲ್ಲಿ ಭಾರಿ ಅಗ್ನಿ ಅನಾಹುತ ಸಂಭವಿಸಿದೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. 24 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಿಯಂತ್ರಣ ಕಾರ್ಯಾಚರಣೆ ನಡೆಯುತ್ತಿದೆ. ಯಾವುದೇ ಸಾವು - ನೋವುಗಳು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಬೆಂಕಿ ನಿಯಂತ್ರಣ ಕಾರ್ಯಾಚರಣೆಯಲ್ಲಿ 24 ಅಗ್ನಿಶಾಮಕ ದಳದ ಸಿಬ್ಬಂದಿ ಭಾಗಿಯಾಗಿದ್ದಾರೆ. ಬೇಗನೆ ಸುಡುವಂತಹ ಕಚ್ಚಾ ವಸ್ತುಗಳು ಕಾರ್ಖಾನೆಯೊಳಗಿತ್ತು. ಆದ್ದರಿಂದ ಬೆಂಕಿ ನಿಯಂತ್ರಿಸಲು ಕಷ್ಟಕರವಾಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಕಾರ್ಖಾನೆಯ ಪ್ರತಿನಿಧಿಯೊಬ್ಬರು ನನಗೆ ತಿಳಿಸಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಹಮದಾಬಾದ್ ಗ್ರಾಮೀಣ ಎಸ್​ಪಿ ಕೆ.ಟಿ.ಕಮರಿಯಾ ತಿಳಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا