Urdu   /   English   /   Nawayathi

ಈ ವರ್ಷಾಂತ್ಯದವರೆಗೆ ಹೆಚ್ -1 ಬಿ ವೀಸಾ ವಿತರಣೆ ತಡೆ ಹಿಡಿದ ಟ್ರಂಪ್: ಭಾರತೀಯರಿಗೆ ಸಂಕಷ್ಟ

share with us

ವಾಷಿಂಗ್ಟನ್: 23 ಜೂನ್ 2020 (ಫಿಕ್ರೋಖಬರ್ ಸುದ್ದಿ) ಭಾರತೀಯ ಐಟಿ ವೃತ್ತಿಪರರಲ್ಲಿ ಜನಪ್ರಿಯವಾಗಿರುವ ಹೆಚ್ -1 ಬಿ ವೀಸಾ ವಿತರಣೆಯನ್ನು ಈ ವರ್ಷದ ಉಳಿದ ಅವಧಿವರೆಗೆ ತಡೆ ಹಿಡಿದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಆದೇಶ ಹೊರಡಿಸಿದ್ದಾರೆ. ಪ್ರಸ್ತುತ ಆರ್ಥಿಕ ಬಿಕ್ಕಟ್ಟಿನಿಂದ ಉದ್ಯೋಗ ಕಳೆದುಕೊಂಡಿರುವ ಲಕ್ಷಾಂತರ ಅಮೆರಿಕನ್ನರಿಗೆ ಸಹಾಯ ಮಾಡಲು ಈ ಹೆಜ್ಜೆ ಅತ್ಯಗತ್ಯ ಎಂದು ಟ್ರಂಪ್ ಹೇಳಿದ್ದಾರೆ. ವಿವಿಧ ವ್ಯಾಪಾರ ಸಂಸ್ಥೆಗಳು, ಶಾಸಕರು ಮತ್ತು ಮಾನವ ಹಕ್ಕುಗಳ ಸಂಸ್ಥೆಗಳ ವಿರೋಧದ ನಡುವೆಯೂ ಟ್ರಂಪ್ ಈ ಆದೇಶ ಹೊರಡಿಸಿದ್ದಾರೆ. ನವೆಂಬರ್​ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಮುನ್ನ ಈ ನಿರ್ಣಯ ಕೈಗೊಂಡಿರುವುದು ಅತ್ಯಂತ ಮಹತ್ವದ್ದೆನಿಸಿದೆ. ಜೂನ್ 24 ರಿಂದ ಈ ನಿಯಮ ಜಾರಿಗೆ ಬರಲಿದೆ. ಇದರಿಂದ ಅಕ್ಟೋಬರ್ 1 ರಿಂದ ಪ್ರಾರಂಭವಾಗುವ 2021 ರ ಆರ್ಥಿಕ ವರ್ಷಕ್ಕೆ ಯುಎಸ್ ಸರ್ಕಾರವು ಎಚ್ -1 ಬಿ ವೀಸಾಗಳನ್ನು ನೀಡಿದ ಹೆಚ್ಚಿನ ಸಂಖ್ಯೆಯ ಭಾರತೀಯ ಐಟಿ ವೃತ್ತಿಪರರು ಮತ್ತು ಹಲವಾರು ಅಮೆರಿಕನ್ ಮತ್ತು ಭಾರತೀಯ ಕಂಪನಿಗಳ ಮೇಲೆ ಪರಿಣಾಮ ಬೀರಲಿದೆ. ಹೊಸ ನಿಯಮದಿಂದಾಗಿ ತಮ್ಮ ಎಚ್ -1 ಬಿ ವೀಸಾಗಳನ್ನು ನವೀಕರಿಸಲು ಬಯಸುವ ಹೆಚ್ಚಿನ ಸಂಖ್ಯೆಯ ಭಾರತೀಯ ಐಟಿ ವೃತ್ತಿಪರರರು ಸ್ಟ್ಯಾಂಪಿಂಗ್ ಪಡೆಯಲು ಈ ವರ್ಷದ ಅಂತ್ಯದವರೆಗೆ ಕಾಯಬೇಕು. ಯುಎಸ್​​ ಕಾರ್ಮಿಕ ಮಾರುಕಟ್ಟೆಯಲ್ಲಿ ವಿದೇಶಿ ಕಾರ್ಮಿಕರ ಪ್ರಭಾವವನ್ನು ಗಮನದಲ್ಲಿಟ್ಟುಕೊಂಡು, ವಿಶೇಷವಾಗಿ ಪ್ರಸ್ತುತ ದೇಶದ ನಿರುದ್ಯೋಗ ಮತ್ತು ಕಾರ್ಮಿಕರ ಖಿನ್ನತೆಯ ಅಸಾಧಾರಣ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ಈ ಆದೇಶ ಹೊರಡಿಸಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ದೇಶದ ನಿರುದ್ಯೋಗ ಮಟ್ಟವು 2020 ರ ಫೆಬ್ರವರಿ ಮತ್ತು ಮೇ ನಡುವೆ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿರುವುದಾಗಿ ಬ್ಯೂರೋ ಆಫ್ ಲೇಬರ್ ಸ್ಟ್ಯಾಟಿಸ್ಟಿಕ್ಸ್ ಹೇಳಿದೆ. ಇದು ಅತ್ಯಂತ ದೊಡ್ಡ ಮಟ್ಟದ ನಿರುದ್ಯೋಗ ಮಟ್ಟವನ್ನು ತೋರಿಸಿದೆ. ಏಪ್ರಿಲ್ -ಮೇ ತಿಂಗಳಲ್ಲಿ 13.3 ರಷ್ಟು ಉದ್ಯೋಗ ಮಟ್ಟ ಕುಸಿದಿದ್ದು, ಇದರಿಂದಾಗಿ ಲಕ್ಷಾಂತರ ಅಮೆರಿಕನ್ನರು ಉದ್ಯೋಗ ರಹಿತರಾಗಲಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا