Urdu   /   English   /   Nawayathi

ನಿನ್ನೆ ಒಂದೇ ದಿನ 197 ಹೊಸ ಪಾಸಿಟಿವ್ ಪ್ರಕರಣ, 2 ಸಾವು: ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1279ಕ್ಕೆ ಏರಿಕೆ

share with us

ಬೆಂಗಳೂರು: 22 ಜೂನ್ 2020 (ಫಿಕ್ರೋಖಬರ್ ಸುದ್ದಿ) ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕೊರೋನಾ ಸೋಂಕಿತರ ಸಂಖ್ಯೆ 1279ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್ ಅವರು ಟ್ವೀಟ್ ಮಾಡಿದ್ದು, ಕಳೆದ 24 ಗಂಟೆಗಳಲ್ಲಿ ನಗರದಲ್ಲಿ 197 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ನಗರದಲ್ಲಿನ ಒಟ್ಟಾರೆ ಸೋಂಕಿತರ ಸಂಖ್ಯೆ 1279ಕ್ಕೆ ಏರಿಕೆಯಾಗಿದೆ. ಅಂತೆಯೇ ನಗರದಲ್ಲಿ ಸೋಂಕಿನಿಂದ ಗುಣಮುಖರಾದ ಒಟ್ಟಾರೆ ಸೋಂಕಿತರ ಸಂಖ್ಯೆ 378ರಷ್ಟಿದೆ. ನಿನ್ನೆ ಬೆಂಗಳೂರಿನಲ್ಲಿ ಒಟ್ಟು ಇಬ್ಬರು ಕೊರೋನಾ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ನಗರದಲ್ಲಿ ಒಟ್ಟಾರೆ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 64ಕ್ಕೆ ಏರಿಕೆಯಾಗಿದೆ. ಈ ಪೈಕಿ 68 ಸಕ್ರಿಯ ಕೇಸ್​ಗಳು, 85 ಜನ ಡಿಸ್ಚಾರ್ಜ್ ಆಗಿದ್ದಾರೆ ಹಾಗೂ 15 ಜನ ಸೋಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರು ಪಶ್ಚಿಮದಲ್ಲಿ ಒಟ್ಟು 144 ಕೊರೋನಾ ಕೇಸ್​ಗಳು ಪತ್ತೆಯಾಗಿವೆ. ಈ ಪೈಕಿ 39 ಸಕ್ರಿಯ ಕೇಸ್, 94 ಜನ ಡಿಸ್ಚಾರ್ಜ್ ಅಗಿದ್ದು, ಇಲ್ಲಿ ಒಟ್ಟು 11 ಸೋಂಕಿತರು ಸಾವನ್ನಪ್ಪಿದ್ದಾರೆ. ಬೆಂಗಳೂರು ದಕ್ಷಿಣದಲ್ಲಿ ಒಟ್ಟು 136 ಕೊರೋನಾ ಪ್ರಕರಣಗಳಲ್ಲಿ 96 ಸಕ್ರಿಯ ಕೇಸ್ ಗಳಿದ್ದು, 28 ಜನ ಡಿಸ್ಚಾರ್ಜ್ ಆಗಿದ್ದು, 8 ಜನ ಮೃತಪಟ್ಟಿದ್ದಾರೆ.  ರಾಜರಾಜೇಶ್ವರಿ ನಗರ ವಲಯದಲ್ಲಿ ಒಟ್ಟು 23 ಕೊರೋನಾ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 12 ಸಕ್ರಿಯ ಪ್ರಕರಣಗಳು ಮತ್ತು 5 ಜನ ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ. ಇಲ್ಲಿ ಕೂಡ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. ಬೊಮ್ಮನಹಳ್ಳಿ ವಲಯದಲ್ಲಿ ಒಟ್ಟು 137 ಕೊರೋನಾ ಕೇಸ್​ಗಳಿದ್ದು, ಅದರಲ್ಲಿ 57 ಸಕ್ರಿಯ ಕೇಸ್ ಗಳು, 74 ಸೋಂಕಿತರು ಡಿಸ್ಚಾರ್ಜ್, 6 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.  ಮಹದೇವಪುರ ವಲಯದಲ್ಲಿ ಒಟ್ಟು 54 ಕೊರೋನಾ ಪ್ರಕರಣಗಳಿವೆ. ಈ ಪೈಕಿ 27 ಸಕ್ರಿಯ ಕೇಸ್ ಗಳಿದ್ದು, 27 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಯಲಹಂಕ ವಲಯದಲ್ಲಿ ಒಟ್ಟು 21 ಕೊರೋನಾ ಕೇಸ್​ಗಳಿದ್ದು, ಇದರಲ್ಲಿ 15 ಸಕ್ರಿಯ ಪ್ರಕರಣ, 5 ಜನ ಡಿಸ್ಚಾರ್ಜ್, ಓರ್ವ ಸಾವನ್ನಪ್ಪಿದ್ದಾರೆ. ದಾಸರಹಳ್ಳಿ ವಲಯದಲ್ಲಿ ಒಟ್ಟು 10 ಕೊರೋನಾ ಪ್ರಕರಣಗಳಿದ್ದು, 9 ಸಕ್ರಿಯ ಪ್ರಕರಣ, ಓರ್ವ ಗುಣಮುಖನಾಗಿ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರು ಹೊರವಲಯದಲ್ಲಿ 42 ಕೊರೋನಾ ಪ್ರಕರಣಗಳಲ್ಲಿ 30 ಸಕ್ರಿಯ ಪ್ರಕರಣ, 6 ಜನ ಡಿಸ್ಚಾರ್ಜ್, 6 ಜನ ಸಾವನ್ನಪ್ಪಿದ್ದಾರೆ. ಉಳಿದಂತೆ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಗೆ ಒಳಪಡದೆ ಇರುವ ಏರಿಯಾಗಳಲ್ಲಿ ಒಟ್ಟು 16 ಕೊರೋನಾ ಕೇಸ್ ಗಳು ದಾಖಲಾಗಿದ್ದು. ಈ ಪೈಕಿ 9 ಸಕ್ರಿಯ ಪ್ರಕರಣಗಳಿವೆ. 7 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

B.H.Anil Kumar,IAS@BBMPCOMM

BBMP Covid19 War Room Bulletin dated 21-06-2020
Total Positive Cases : 1279
Total Recovered Cases : 378
Total Deaths : 64

Last 24 Hours
Total Positive Cases : 197
Total Recovered Cases : 00
Total Deaths : 02

Click here  https://www.facebook.com/628402897294978/posts/1880105482124707/ …

View image on TwitterView image on TwitterView image on Twitter

27

7:32 PM - Jun 21, 2020

Twitter Ads info and privacy

25 people are talking about this

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا