Urdu   /   English   /   Nawayathi

ಬಿಗ್ ಬ್ರೇಕಿಂಗ್ ನ್ಯೂಸ್ : ಬೆಂಗಳೂರಲ್ಲಿ ಇಂದು ಸಂಜೆಯಿಂದಲೇ ಮತ್ತೆ ಲಾಕ್‌ಡೌನ್..!

share with us

ಬೆಂಗಳೂರು: 22 ಜೂನ್ 2020 (ಫಿಕ್ರೋಖಬರ್ ಸುದ್ದಿ) ಮಹಾನಗರ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಮಿತಿ ಮೀರಿ ಹರಡುತ್ತಿದ್ದು, ಸಮುದಾಯಕ್ಕೆ ಹಬ್ಬುವುದನ್ನು ತಪ್ಪಿಸಲು ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಲಾಕ್‍ಡೌನ್ ಬಿಗಿಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿಂದು ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಬೆಂಗಳೂರುನಗರದ ಸಚಿವರು, ಬಿಬಿಎಂಪಿ ಮತ್ತು ಬೆಂಗಳೂರು ಪೊಲೀಸ್ ಅಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಬೆಂಗಳೂರಿನಲ್ಲಿ ದಿನೇದಿನೇ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಬಗ್ಗೆ ಆತಂಕಗಳು ಕೇಳಿಬಂದವು. ಈಗಲೇ ಎಚ್ಚೆತ್ತುಕೊಳ್ಳದೇ ಇದ್ದರೆ ಸೋಂಕು ಸಮುದಾಯಕ್ಕೆ ಹರಡುವ ಸಾಧ್ಯತೆ ಇದೆ. ಮುಂಜಾಗ್ರತೆ ತೆಗೆದುಕೊಳ್ಳಲೇಬೇಕೆಂದು ಅಕಾರಿಗಳು ಸಲಹೆ ನೀಡಿದರು. ಈ ಬಗ್ಗೆ ಬೆಂಗಳೂರು ನಗರ ಸಚಿವರಾದ ಅಶ್ವಥ್ ನಾರಾಯಣ, ಆರ್.ಅಶೋಕ್, ವಿ.ಸೋಮಣ್ಣ ಸೇರಿದಂತೆ ಇತರರ ಅಭಿಪ್ರಾಯಗಳನ್ನು ಕೂಡ ಮುಖ್ಯಮಂತ್ರಿಗಳು ಕೇಳಿದರು. ನಂತರ ತೆಗೆದುಕೊಂಡ ತೀರ್ಮಾನದಲ್ಲಿ ಜಯನಗರ, ಬಸವನಗುಡಿ, ಶಿವಾಜಿನಗರ, ಚಾಮರಾಜಪೇಟೆ, ಚಿಕ್ಕಪೇಟೆ, ರಾಜಾಜಿನಗರ, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರಗಳಲ್ಲಿ ಲಾಕ್‍ಡೌನ್ ಬಿಗಿಗೊಳಿಸಲಾಗುತ್ತಿದೆ. ಸಂಪೂರ್ಣ ಲಾಕ್‍ಡೌನ್‍ನಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ ಜನರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಲಾಕ್‍ಡೌನ್ ಸಡಿಲ ಮಾಡಲಾಗಿತ್ತು. ಆದರೆ ಜನ ಅದನ್ನು ದುರುಪಯೋಗ ಪಡಿಸಿಕೊಂಡರು. ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವಲ್ಲಿ ನಿರ್ಲಕ್ಷ್ಯತೆ ತೋರಿಸಿದರು. ಹಾಗಾಗಿ ಸೋಂಕು ಮಿತಿಮೀತಿ ಬೆಳೆಯುತ್ತಿದೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಪರಿಸ್ಥಿತಿ ಕೈ ಮೀರಿ ಹೋಗಲಿದೆ ಎಂಬ ಆತಂಕ ವ್ಯಕ್ತವಾಯಿತು. ಈ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7ರಿಂದ 10 ಗಂಟೆವರೆಗೆ ಕೇವಲ ಮೂರು ಗಂಟೆಗಳ ಕಾಲ ಹಾಲು, ತರಕಾರಿ, ದಿನಸಿಯಂತಹ ಅಗತ್ಯ ವಸ್ತುಗಳ ಖರೀದಿಗಾಗಿ ಲಾಕ್‍ಡೌನ್‍ನ್ನು ಸಡಿಲಗೊಳಿಸಲಾಗುತ್ತದೆ. ಉಳಿದಂತೆ ಬಿಗಿಯಾದ ಲಾಕ್‍ಡೌನ್ ಜಾರಿಗೊಳಿಸಲಾಗುತ್ತದೆ.

ಈ ಮೊದಲು ಜಾರಿಯಲ್ಲಿದ್ದ ಲಾಕ್‍ಡೌನ್‍ನ ನಿಯಮಾವಳಿಗಳಲ್ಲಿ ಶೇ.100ರಷ್ಟು ವಿನಾಯ್ತಿ ನೀಡಲಾಗಿತ್ತು. ವ್ಯಾಪಾರ ವಹಿವಾಟುಗಳು ಈ ಭಾಗದಲ್ಲೇ ಹೆಚ್ಚಾಗಿವೆ. ಜೊತೆಯಲ್ಲಿ ಸೋಂಕು ಕೂಡ ಹೆಚ್ಚಾಗುತ್ತಿದೆ. ಹಾಗಾಗಿ ಶೇ.70ರಷ್ಟು ಲಾಕ್‍ಡೌನ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೋಂಕು ನಿಯಂತ್ರಣ ಮೀರಿ ಹೆಚ್ಚಾಗುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದರು. ಇನ್ನುಮುಂದೆ ಮಾಸ್ಕ್ ಧರಿಸದೆ ಓಡಾಡುವವರನ್ನು, ಕಂಡಕಂಡಲ್ಲಿ ಉಗುಳುವವರನ್ನು, ಸೋಂಕು ನಿಯಂತ್ರಣಕ್ಕೆ ಅಗತ್ಯವಾದ ಮುನ್ನೆಚ್ಚರಿಕೆ ಕ್ರಮ ಪಾಲಿಸದೆ ಬೇಕಾಬಿಟ್ಟಿ ವರ್ತಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಅಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹೊರರಾಜ್ಯಗಳಿಂದ ಆಗಮಿಸುವವರನ್ನು 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್‍ನಲ್ಲಿಡಬೇಕು ಎಂದು ಸೂಚಿಸಿದ್ದಾರೆ. ಪಾದರಾಯನಪುರದಲ್ಲಿ 2080 ಮಂದಿ ಗರ್ಭಿಣಿಯರಿದ್ದು ಅವರನ್ನು ಕೂಡಲೇ ಕ್ವಾರಂಟೈನ್‍ಗೆ ಒಳಪಡಿಸಬೇಕು, ಬಾಣಂತಿಯರನ್ನೂ ಸುರಕ್ಷಿತ ದೃಷ್ಟಿಯಿಂದ ಕ್ವಾರಂಟೈನ್‍ಗೊಳಪಡಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಜನ ಸಂಚಾರ ಹೆಚ್ಚಿರುವ ಮತ್ತು ಸೋಂಕಿನ ಪ್ರಮಾಣ ತೀವ್ರವಾಗಿರುವ ಮೆಜೆಸ್ಟಿಕ್ ಮತ್ತು ಗಾಂನಗರ ಪ್ರದೇಶಗಳಲ್ಲಿ ಬಿಗಿಯಾದ ಕಾನೂನು ಜಾರಿಗೊಳಿಸುವಂತೆ ಲಾಕ್‍ಡೌನ್ ನಿಯಮಗಳನ್ನು ಪಾಲಿಸಲು ತಾಕೀತು ಮಾಡುವಂತೆ ಸಿಎಂ ಸೂಚನೆ ನೀಡಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا