Urdu   /   English   /   Nawayathi

ಗರ್ಭಿಣಿಗೆ ಮೊದಲು ಪಾಸಿಟಿವ್ ನಂತರ ನೆಗಟಿವ್..?

share with us

ಗೌರಿಬಿದನೂರು: 21 ಜೂನ್ 2020 (ಫಿಕ್ರೋಖಬರ್ ಸುದ್ದಿ) ನಗರದ ನಾಗಯ್ಯರೆಡ್ಡಿ ಬಡಾವಣೆಯಲ್ಲಿ ಗರ್ಭಿಣಿ ಮಹಿಳೆಗೆ ಕೊರೊನಾ ದೃಢಪಟ್ಟಿದ್ದು (ಪಾಸಿಟಿವ್) ಮತ್ತೊಮ್ಮೆ ತಪಾಸಣೆ ಮಾಡಿದಾಗ ನೆಗಟಿವ್ ಬಂದಿದ್ದು, ಇದರಿಂದ ಆರೋಗ್ಯ ಇಲಾಖೆಯ ವೈದ್ಯರುಗಳಿಗೇ ಒಂದು ರೀತಿ ಗೊಂದಲಕ್ಕಿ ಸಿಲುಕಿದಂತಾಗಿದೆ. ಆಂಧ್ರದ ಹಿಂದೂಪುರದಿಂದ ಗರ್ಭಿಣಿ ಮಹಿಳೆ ತನ್ನ ತರವರು ಮನೆಗೆ (ಗೌರಿಬಿದನೂರು ನಾಗಯ್ಯರೆಡ್ಡಿ ಬಡಾವಣೆಗೆ) ಜು.26 ಬಂದಿದ್ದು, ಜು.17 ರಂದು ತಾಲೂಕು ಆರೋಗ್ಯಾಧಿಕಾರಿಗಳು ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ್ದು ಜು.19 ರಂದು ಪಾಸಿಟೀವ್ ಬಂದಿದ್ದು ಸೋಂಕಿತ ಮಹಿಳೆಯನ್ನು ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ರವಾನಿಸಿಲಾಗಿತ್ತು,  ಆದರೆ ಅದೇ ಮಹಿಳೆಗೆ ಜು.19 ರಂದು ಮತ್ತೊಮ್ಮೆ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ್ದು ಇಂದು(ಜು.20) ನೆಗಟಿವ್ ವರದಿ ಬಂದಿದ್ದು, ಇದರಿಂದ ವೈದರುಗಳಲ್ಲಿ ಗೊಂದಲಕ್ಕೀಡಾಗಿದ್ದಾರೆ. ನಗರದ ನಾಗಯ್ಯರೆಡ್ಡಿ ಬಡಾವಣೆಯಲ್ಲಿನ ಗರ್ಭಿಣಿ ಮಹಿಳೆಗೆ ಮೊದಲ ಬಾರಿ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು ಎರಡನೇ ಬಾರಿ ಪರೀಕ್ಷೆಯಲ್ಲಿ ನೆಗಟಿವ್ ಬಂದಿದೆ ಇದು ಲ್ಯಾಬ್ ಎಡವಟ್ಟಾ ಅಥವಾ ಪರೀಕ್ಷೆಯಲ್ಲಿ ಲೋಪದೋಶವಾ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ನಗರದ ನಾಗಯ್ಯರೆಡ್ಡಿ ಬಡಾವಣೆಗೆ ತಹಸೀಲ್ದಾರ್ ಎಂ.ರಾಜಣ್ಣ ಬೇಟಿ ನೀಡಿ ಅಲ್ಲಿನ ಆರೋಗ್ಯ ಇಲಾಖೆ ತೆಗೆದುಕೊಂಡಿರುವ ಕ್ರಮಗಳನ್ನು ಪರಿಶೀಲನೆ ನಡೆಸಿ, ಸಾರ್ವಜನಿಕರುಗಳಿಗೆ ದೈರ್ಯ ತುಂಬಿ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ, ಸಾರ್ವಜನಿಕರು ಮಾಸ್ಕ್ ಧರಿಸಿಕೊಂಡು ಓಡಾಡುವಂತೆ ತಿಳಿಸಿದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا