Urdu   /   English   /   Nawayathi

ಲಡಾಖ್: ಗಡಿ ಸಂಘರ್ಷದ ಮೂಲಕ ಚೀನಾ ತಡೆಯಲು ಬಯಸಿದ ಆಯಕಟ್ಟಿನ ಪ್ರಮುಖ ಬ್ರಿಡ್ಜ್ ಕಾಮಗಾರಿ ಪೂರ್ಣಗೊಳಿಸಿದ ಭಾರತ

share with us

ನವದೆಹಲಿ: 21 ಜೂನ್ 2020 (ಫಿಕ್ರೋಖಬರ್ ಸುದ್ದಿ) ಚೀನಾದೊಂದಿಗಿನ ಗಡಿ ಸಂಘರ್ಷದ ಪ್ರಕ್ಷುಬ್ಧ ವಾತಾವರಣದ ನಡುವೆಯೂ ಭಾರತ ಈಶಾನ್ಯ ಲಡಾಖ್ ನಲ್ಲಿ ಆಯಕಟ್ಟಿನ, ಪ್ರಮುಖ ಬ್ರಿಡ್ಜ್ ಕಾಮಗಾರಿಯನ್ನು ಪೂರ್ಣಗೊಳಿಸಿದೆ. ಈ ಮೂಲಕ ಚೀನಾ ಏನೇ ಕ್ಯಾತೆ ತೆಗೆಯಲು ಗಡಿ ಭಾಗದಲ್ಲಿ ಆಯಕಟ್ಟಿನ ಸ್ಥಳಗಳಿಗೆ ಸೇನೆಗೆ ಸಂಪರ್ಕ ಕಲ್ಪಿಸುವ ರಸ್ತೆ, ಸೇತುವೆ ನಿರ್ಮಾಣ ಕಾಮಗಾರಿಯನ್ನು ಭಾರತ ವಿಳಂಬ ಮಾಡುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನೆಯಾಗಿದೆ. ಈಶಾನ್ಯ ಲಡಾಖ್ ನಲ್ಲಿರುವ ಷ್ಯೋಕ್ ನದಿಗೆ ಈ ಸೇತುವೆ ನಿರ್ಮಾಣ ಮಾಡಲಾಗಿದ್ದು, ಚೀನಾ ಸೈನಿಕರೊಂದಿಗಿನ ಸಂಘರ್ಷದ ನಡುವೆಯೇ ಗುರುವಾರದಂದು ಕಾಮಗಾರಿ ಪೂರ್ಣಗೊಂಡಿದೆ. 6 ಮೀಟರ್ ನಷ್ಟಿರುವ ಈ ಸೇತುವೆ ಷ್ಯೋಕ್- ಗಾಲ್ವನ್ ನದಿಗಳ ಸಂಗಮದಿಂದ ಪೂರ್ವಕ್ಕೆ 4 ಕಿಮೀ ನಷ್ಟು ದೂರವಿದ್ದು,  ಪರ್ವತ ಪ್ರದೇಶದಿಂದ ಷ್ಯೋಕ್-ದೌಲತ್ ಬೇಗ್ ಓಲ್ಡಿ ರಸ್ತೆಗೆ ಸಂಪರ್ಕ ಕಲ್ಪಿಸಲಿದ್ದು ಭಾರತೀಯ ಪಡೆಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا