Urdu   /   English   /   Nawayathi

ಕೊನೆಗೂ ಅಂಕೋಲಾಕ್ಕೆ ಕಾಲಿಟ್ಟ ಕೊರೋನಾ!!?

share with us

ಕಾರವಾರ: 17 ಜೂನ್ 2020 (ಫಿಕ್ರೋಖಬರ್ ಸುದ್ದಿ) ಜಿಲ್ಲೆಯ 11 ತಾಲೂಕುಗಳಲ್ಲೂ ಕೊರೋನಾ ಪ್ರಕರಣಗಳು ಪತ್ತೆಯಾದರೂ, ಯಾವುದೇ ಒಂದೂ ಕೊರೋನಾ ಪ್ರಕರಣವಿಲ್ಲದೆ ನಿಶ್ಚಿಂತೆಯಿಂದಿದ್ದ ಅಂಕೋಲಿಗರಿಗೂ ಇಂದು ಶಾಕಿಂಗ್ ಸುದ್ದಿ ಕಾದಿದೆ. ಅಂಕೋಲಾದಲ್ಲೂ ಇಂದು ಒಂದು ಸೋಂಕಿತರ ಪ್ರಕರಣ ದೃಢಪಟ್ಟಿರುವ ಶಂಕೆ ಇದೆ. ಎರಡು ದಿನಗಳ ಹಿಂದೆ ಅಂಕೋಲಾದ ಗ್ರಾಮೀಣ ಭಾಗದಲ್ಲಿನ ಮನೆಯೊಂದರಿಂದ ಇಬ್ಬರ ಗಂಟಲು ದ್ರವವನ್ನು ಪಡೆಯಲಾಗಿತ್ತು. ಇವರು ಕುಮಟಾದಲ್ಲಿ ಸೋಂಕಿತರಾದ ವ್ಯಕ್ತಿಯ ಮಗಳು ಹಾಗೂ ಅಳಿಯ ಎನ್ನಲಾಗಿದೆ. ಇವರು ಕುಮಟಾ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದ ಕಾರಣ ಮಗಳಲ್ಲಿ ಸೋಂಕು ದೃಢಪಟ್ಟಿರುವ ಶಂಕೆ ಇದೆ. ಇನ್ನು, ಕಾರವಾರದಲ್ಲಿ ಮಹಾರಾಷ್ಟ್ರದಿಂದ ವಾಪಸ್ಸಾಗಿದ್ದ ಮೂವರಲ್ಲಿ ಸೋಂಕು ದೃಢಪಟ್ಟಿದ್ದು, ಈ ಬಗ್ಗೆ ಸಂಜೆಯ ಬುಲೆಟಿನ್ ನಲ್ಲಿ ಖಚಿತವಾಗಬೇಕಿದೆ.

Prayer Timings

Fajr فجر
Dhuhr الظهر
Asr أسر
Maghrib مغرب
Isha عشا