Urdu   /   English   /   Nawayathi

ಕೊರೋನಾ ವೈರಸ್: ವಾಸ್ತವ ಸಂಗತಿ ಪ್ರಚಾರಕ್ಕೆ ವಿಶ್ವಸಂಸ್ಥೆಯೊಂದಿಗೆ ಕೈಜೋಡಿಸಿದ ಭಾರತ

share with us

ವಾಷಿಂಗ್ಟನ್: 15 ಜೂನ್ 2020 (ಫಿಕ್ರೋಖಬರ್ ಸುದ್ದಿ) ಮಾರಕ ಕೊರೋನಾ ವೈರಸ್ ಕುರಿತಂತೆ ಜಗತ್ತಿಗೆ ನೈಜಾಂಶಗಳನ್ನು ತಿಳಿಸುವ ವಿಶ್ವಸಂಸ್ಥೆ ಮಹಾ ಅಭಿಯಾನಕ್ಕೆ 132 ದೇಶಗಳ ಜೊತೆ ಇದೀಗ ಭಾರತ ಕೂಡ ಕೈ ಜೋಡಿಸಿದೆ. ಕೋವಿಡ್‌–19 ಕುರಿತಂತೆ ಜಗತ್ತಿಗೆ ಸತ್ಯ ಸಂಗತಿಗಳನ್ನು ತಿಳಿಸಲು 132 ದೇಶಗಳು ಒಟ್ಟಾಗಿ ಆರಂಭಿಸಿರುವ ಉಪಕ್ರಮಕ್ಕೆ ಭಾರತವೂ ಕೈಜೋಡಿಸಿದ್ದು, ಕೊರೋನಾ ವೈರಸ್‌, ಇದರಿಂದ ಹರಡುವ ಸೋಂಕು ಕುರಿತು ಹಬ್ಬಿಸಲಾಗುತ್ತಿರುವ ತಪ್ಪು, ತಿರುಚಿದ ಮಾಹಿತಿ ವಿರುದ್ಧ ಈ ದೇಶಗಳು ಒಟ್ಟಾಗಿ ಹೋರಾಡಲು ಮುಂದಾಗಿವೆ. ಇಂತಹ ತಪ್ಪು ಮಾಹಿತಿಯನ್ನು 'ಇನ್ಫೋಡೆಮಿಕ್‌' ಅಂದರೆ, 'ಕೋವಿಡ್‌-19 ಪಿಡುಗು ಕುರಿತ ತಿರುಚಿದ ಮಾಹಿತಿ' ಎಂದು ಹೆಸರಿಸಲಾಗಿದೆ. 'ಇನ್ಫೋಡೆಮಿಕ್‌' ವಿರುದ್ಧ ಆಸ್ಟ್ರೇಲಿಯಾ, ಚಿಲಿ, ಫ್ರಾನ್ಸ್, ಜಾರ್ಜಿಯಾ, ಭಾರತ, ಇಂಡೋನೇಷ್ಯಾ, ಲಾಟ್ವಿಯಾ, ಲೆಬನಾನ್, ಮಾರಿಷಸ್, ಮೆಕ್ಸಿಕೊ, ನಾರ್ವೆ, ಸೆನೆಗಲ್ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ 132 ದೇಶಗಳು ಹೋರಾಟಕ್ಕೆ ಮುಂದಾಗಿವೆ. ಇದೀಗ ಈ ಹೋರಾಟಕ್ಕೆ ಭಾರತ ಕೂಡ ಕೈ ಜೋಡಿಸಿವೆ. ಈ ಬಗ್ಗೆ ಮಾತನಾಡಿರುವ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್‌ ಅವರು, 'ಕೋವಿಡ್‌–19 ವಿರುದ್ಧದ ಹೋರಾಟದ ಜೊತೆಗೆ, ಈ ಪಿಡುಗು ಕುರಿತ ತಪ್ಪು ಮಾಹಿತಿ ಪ್ರಸಾರ, ಹಾನಿ ಉಂಟು ಮಾಡುವ ಆರೋಗ್ಯ ಸಲಹೆಗಳು, ದ್ವೇಷ ಭಾಷಣ, ಸಂಚಿನ ಭಾಗವಾಗಿ ಈ ಸೋಂಕು ಹರಡಿಸಲಾಗುತ್ತಿದೆ ಎಂಬಂಥ ಸುಳ್ಳು ಪ್ರಚಾರದ ವಿರುದ್ಧ ಹೋರಾಟ ಅಗತ್ಯ' ಎಂದು ಹೇಳಿದ್ದಾರೆ. ಇನ್ನು ಇದೇ ವಿಚಾರವಾಗಿ ಮಾತನಾಡಿದ ವಿಶ್ವಸಂಸ್ಥೆಯ ಜಾಗತಿಕ ಸಂವಹನ ವಿಭಾಗದ ಮಹಾ ಕಾರ್ಯದರ್ಶಿ ಮೆಲಿಸ್ಸಾ ಫ್ಲೆಮಿಂಗ್‌, 'ಕೋವಿಡ್‌-19 ಪಿಡುಗನ್ನೇ ನೆಪವಾಗಿಟ್ಟುಕೊಂಡು ಕೆಲವು ದೇಶಗಳಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಡಿಜಿಟಲ್ ಫ್ಲಾಟ್ ಫಾರ್ಮ್ ಗಳಲ್ಲಿ ಊಹಾಪೋಹಗಳು ಹರಿದಾಡುತ್ತಿದ್ದು, ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಇದರಿಂದ ಅಲ್ಪ ಸಂಖ್ಯಾತರ ಮೇಲಿನ ಅಪನಂಬಿಕೆ ಹೆಚ್ಚಾಗುತ್ತಿದೆ. ಸಾಂಕ್ರಾಮಿಕ ಬಿಕ್ಕಟ್ಟನ್ನೇ ದುರ್ಬಳಕೆ ಮಾಡಿಕೊಂಡು ಅಲ್ಪ ಸಂಖ್ಯಾತರನ್ನು ಗುರಿಯಾಗಿಸಿಕೊಳ್ಳಲಾಗುತ್ತಿದೆ. ಇಂತಹ ಘಟನೆಗಳಿಂದ ದೇಶದ ಆರ್ಥಿಕತೆ ಮತ್ತು ಸಾಮಾಜಿಕ ಸ್ವಾಸ್ಥ್ಯ ಹಾಳಾಗಲಿದೆ ಎಂದು ಎಚ್ಚರಿಸಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا