Urdu   /   English   /   Nawayathi

ಎಂಟು ದಿನಗಳಲ್ಲೇ ಪೆಟ್ರೋಲ್​​-4.52 ರೂ, ಡೀಸೆಲ್​- 4.64 ರೂ. ಹೆಚ್ಚಳ

share with us

ನವದೆಹಲಿ: 14 ಜೂನ್ 2020 (ಫಿಕ್ರೋಖಬರ್ ಸುದ್ದಿ) ಸತತ ಎಂಟು ದಿನಗಳಿಂದ ಇಂಧನ ಬೆಲೆಯಲ್ಲಿ ಭಾರೀ ಪ್ರಮಾಣದ ಏರಿಕೆಯಾಗುತ್ತಿದೆ. ಇಂದು ಪ್ರತಿ ಲೀಟರ್​ ಪೆಟ್ರೋಲ್ ಮೇಲೆ 62 ಪೈಸೆ ಹಾಗೂ ಡೀಸೆಲ್​ಗೆ 64 ಪೈಸೆ ಹೆಚ್ಚಳವಾಗಿದೆ. ದೇಶದ ಪ್ರಮುಖ ನಗರಗಳಾದ ದೆಹಲಿ, ಬೆಂಗಳೂರು, ಮುಂಬೈ, ಚೆನ್ನೈ ಮತ್ತು ಹೈದರಾಬಾದ್​ಗೆ ಇದು ಅನ್ವಯವಾಗಲಿದೆ. ಆದರೆ ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್‌ನ ಪ್ರಮಾಣದ ಮೇಲೆ ಆಯಾ ರಾಜ್ಯಗಳಲ್ಲಿ ದರ ನಿಗದಿಯಾಗುತ್ತದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಪೆಟ್ರೋಲ್ ಹಾಗೂ ಡೀಸೆಲ್​ ಬೆಲೆ ಕ್ರಮವಾಗಿ 75.78 ರೂ. ಮತ್ತು 74.03 ರೂ. ಇದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್​ಗೆ 78.23 ರೂ ಹಾಗೂ ಡೀಸೆಲ್​ಗೆ 70.39 ರೂಪಾಯಿ ಇದೆ. ಜೂನ್​ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆ ಲೀಟರ್‌ಗೆ 5 ರೂ. ವರೆಗೂ ಏರಿಕೆಯಾಗಬಹುದು ಎಂದು ಈ ಹಿಂದೆ ಹೇಳಲಾಗಿತ್ತು. 82 ದಿನಗಳ ಲಾಕ್​​ಡೌನ್​ ಬಳಿಕ ಜೂನ್​ 7 ರಿಂದ ತೈಲ ಕಂಪನಿಗಳು ಇಂಧನ ಬೆಲೆ ಹೆಚ್ಚಿಸಿದ್ದವು. ಇದೀಗ ಎಂಟು ದಿನಗಳಲ್ಲೇ ಲೀಟರ್​ ಪೆಟ್ರೋಲ್​​ ಮೇಲೆ 4.52 ರೂ ಹಾಗೂ ಡೀಸೆಲ್​ಗೆ 4.64 ರೂ. ಏರಿಕೆಯಾದಂತಾಗಿದೆ.

ಈ, ಇ ವರದಿ      

Prayer Timings

Fajr فجر
Dhuhr الظهر
Asr أسر
Maghrib مغرب
Isha عشا