Urdu   /   English   /   Nawayathi

ಉಡುಪಿಗೆ ಮತ್ತೆ ಮುಂಬೈ ಸಹಿತ ಹೊರ ರಾಜ್ಯದಿಂದ 7೦೦೦ ಮಂದಿ ಬರಲು ಸಿದ್ದರಾಗಿದ್ದಾರೆ!

share with us

ಉಡುಪಿ: 11 ಜೂನ್ 2020 (ಫಿಕ್ರೋಖಬರ್ ಸುದ್ದಿ) ಕಳೆದ ಎರಡು ದಿನದಿಂದ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲವೆಂದು ಜಿಲ್ಲೆಯ ಜನರು ನಿಟ್ಟುಸಿರು ಬಿಡುವ ಹಾಗೆ ಇಲ್ಲ, ಯಾಕೆಂದರೆ ಮತ್ತೆ ಮುಂಬೈನಿಂದ ಮತ್ತು ಇತರ ರಾಜ್ಯಗಳಿಂದ ಉಡುಪಿ ಜಿಲ್ಲೆಗೆ 7000 ಕ್ಕೂ ಮಿಕ್ಕಿ ತಮ್ಮ ಹುಟ್ಟೂರಿಗೆ ಬರಲು ಜನ ಆತುರದಿಂದ ಕಾಯುತ್ತಿದ್ದಾರೆ. ಕೊರೊನಾ ಮಹಾಮಾರಿ ಜಿಲ್ಲೆಯಲ್ಲಿ 947 ಪಾಸಿಟಿವ್‌ನಿಂದ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಕೇಸ್ ದಾಖಲಾಗಿಲ್ಲ. ಇದರಿಂದ ನೆಮ್ಮದಿ ಪಡುವ ಹಾಗೆ ಇಲ್ಲ. ಉಡುಪಿಗೆ ಬರಲು ಜಿಲ್ಲಾಡಳಿತಕ್ಕೆ ಮುಂಬೈನಿಂದ ಇನ್ನೂ ಐದು ಸಾವಿರಕ್ಕೂ ಹೆಚ್ಚಿನ ಅರ್ಜಿಗಳು ಬಂದಿದ್ದು, ಮಾತ್ರವಲ್ಲದೆ ಇತರ ರಾಜ್ಯಗಳಿಂದಲೂ ಸಾವಿರಾರು ಜನ ಜಿಲ್ಲೆಗೆ ಬರಲು ಸಿದ್ದರಾಗಿದ್ದಾರೆ. ಉಡುಪಿ ಜಿಲ್ಲೆಯ ಪಾಸಿಟಿವ್ ಕೇಸುಗಳ ಪೈಕಿ 327 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 619 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು 1200 ಮಂದಿ ಹೊರ ರಾಜ್ಯದಿಂದ ಬಂದವರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಹೊರ ರಾಜ್ಯದಿಂದ ಏಳೆಂಟು ಸಾವಿರ ಮಂದಿ ಬಂದರೆ ಅದರಲ್ಲಿ ಶೇ.10ರಷ್ಟು ಮಂದಿಯಲ್ಲಿ ಕೊರೊನಾ ಕಾಣಿಸಿಕೊಳ್ಳಲಿದೆ. ಹೊರರಾಜ್ಯದಿಂದ ಬರುವ ಶೇ.10 ಜನರಲ್ಲಿ ಸೋಂಕು ಕಂಡುಬರುತ್ತಿದೆ. ಹಾಗಾಗಿ ಉಡುಪಿಯಲ್ಲಿ 1200 ಬೆಡ್ ಕೆಪಾಸಿಟಿಯ 5 ಆಸ್ಪತ್ರೆಗಳನ್ನು ಕೋವಿಡ್‌ಗಳಿಗಾಗಿ ಮೀಸಲಿಡಲಾಗಿದೆ. ಈವರೆಗಿನ ಚಿಕಿತ್ಸೆಯನ್ನು ಸರ್ಕಾರ ಮತ್ತು ಟಿಎಂಎಪೈ ಖಾಸಗಿ ಆಸ್ಪತ್ರೆ ಉಚಿತವಾಗಿ ನೀಡಿದೆ. ಲಾಕ್‌ಡೌನ್ ಸಂಪೂರ್ಣ ತೆರವು ಆದ ಮೇಲೆ ರೋಗಿಗಳ ಚಿಕಿತ್ಸಾ ವೆಚ್ಚ ಏನು ಎತ್ತ ಎಂಬುದನ್ನು ಸರ್ಕಾರ ಇನ್ನೂ ಪ್ರಕಟಿಸಿಲ್ಲ. ಹೀಗಾಗಿ ಕೊರೊನಾ ನಂಬರ್ ಒನ್ ಜಿಲ್ಲೆ ಎಂಬ ಕಳಂಕ ಹೊತ್ತಿರುವ ಉಡುಪಿ ಮತ್ತೆ ಗ್ರೀನ್ ಝೋನ್ ಆಗಲು ಮತ್ತಷ್ಟು ಸಮಯ ಬೇಕಾಗಬಹುದು.

ಉ, ಟೈ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا