Urdu   /   English   /   Nawayathi

ಜಾರ್ಜ್ ಫ್ಲಾಯ್ಡ್ ಪ್ರತಿಭಟನೆ ಮಧ್ಯೆ ಮಹಾತ್ಮ ಗಾಂಧಿ ಪ್ರತಿಮೆ ವಿರೂಪಗೊಳಿಸಿದ್ದು ನಾಚಿಕೆಗೇಡು: ಟ್ರಂಪ್

share with us

ವಾಷಿಂಗ್ಟನ್: 11 ಜೂನ್ 2020 (ಫಿಕ್ರೋಖಬರ್ ಸುದ್ದಿ) ಆಫ್ರಿಕನ್-ಅಮೆರಿಕಾದ ಪ್ರಜೆ ಜಾರ್ಜ್ ಫ್ಲಾಯ್ಡ್ ಹತ್ಯೆ ವಿರೋಧಿಸಿ ಅಮೆರಿಕ ರಾಷ್ಟ್ರದಾದ್ಯಂತ ಪ್ರತಿಭಟನೆ ನಡೆಯುತ್ತಿರುವಂತೆ ಅಪರಿಚಿತ ಕಿಡಿಗೇಡಿಗಳು ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ವಿರೂಪಗೊಳಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಭಾರತೀಯ ರಾಯಭಾರಿ ಕಚೇರಿ ಬಳಿಯ ಉದ್ಯಾನವನದಲ್ಲಿ ಸ್ಥಾಪಿಸಲಾಗಿರುವ ಮಹಾತ್ಮ ಗಾಂಧಿ ಪ್ರತಿಮೆಯನ್ನು ಜೂನ್ 2 ಮತ್ತು ಜೂನ್ 3ರ ಮಧ್ಯರಾತ್ರಿ ಧ್ವಂಸಗೊಳಿಸಲಾಗಿದ್ದು, ಸ್ಥಳೀಯ ಕಾನೂನು ಜಾರಿ ಏಜೆನ್ಸಿಯಲ್ಲಿ ಭಾರತೀಯ ರಾಯಭಾರಿ ಅಧಿಕಾರಿಗಳಿಂದ ದೂರು ದಾಖಲಿಸಲಾಗಿದೆ. ಪೊಲೀಸ್ ಕಸ್ಟಡಿಯಲ್ಲಿದ್ದ ಜಾರ್ಜ್ ಫ್ಲಾಯ್ಡ್ ಹತ್ಯೆ ವಿರೋಧಿಸಿ ಅಮೆರಿಕದಾದ್ಯಂತ ಒಂದು ವಾರದಿಂದ ನಡೆಯುತ್ತಿರುವ ಪ್ರತಿಭಟನೆ ನಡುವೆ ಈ ಘಟನೆ ನಡೆದಿದೆ. 

ANI@ANI

Mahatma Gandhi’s statue outside the Indian Embassy in Washington DC desecrated by unruly elements of protesters. Sources tell ANI that United States Park Police have launched an investigation, more details awaited.

View image on Twitter

9,732

6:54 AM - Jun 4, 2020

Twitter Ads info and privacy

3,479 people are talking about this

ಈ ಘಟನೆ ಬಗ್ಗೆ ಶ್ವೇತಭವನದಲ್ಲಿ ಪ್ರತಿಕ್ರಿಯಿಸಿದ ಡೊನಾಲ್ಡ್ ಟ್ರಂಪ್, ಇದೊಂದು ನಾಚಿಕೆಗೇಡಿನದಾಗಿದೆ. ಈ ವಿಚಾರದ ಬಗ್ಗೆ ಶೀಘ್ರವಾಗಿ ತನಿಖೆ ನಡೆಸಬೇಕೆಂದು ಕೋರಿ ಅಮೆರಿಕಾದ ಸ್ಟೇಟ್ ಡಿಪಾರ್ಟ್ ಮೆಂಟ್, ಮೆಟ್ರೊಪಾಲಿಟಿನ್ ಪೊಲೀಸ್ ಮತ್ತು ನ್ಯಾಷನಲ್ ಪಾರ್ಕ್ ಸರ್ವಿಸ್ ನಲ್ಲಿ ಭಾರತೀಯ ರಾಯಭಾರಿ ಅಧಿಕಾರಿಗಳು ದೂರು ಸಲ್ಲಿಸಿದ್ದಾರೆ. ಅಮೆರಿಕಾದ ಸ್ಟೇಟ್ ಡಿಪಾರ್ಟ್ ಮೆಂಟ್, ಮೆಟ್ರೋಪಾಲಿಟಿನ್ ಪೊಲೀಸ್ ಮತ್ತು ನ್ಯಾಷನಲ್ ಪಾರ್ಕ್ ಸರ್ವಿಸ್ ಜೊತೆಗೆ ಉದ್ಯಾನವನದಲ್ಲಿ ಪ್ರತಿಮೆ ಪುನರ್ ಸ್ಥಾಪಿಸುವ ನಿಟ್ಟಿನಲ್ಲಿ ಭಾರತೀಯ ರಾಯಭಾರಿ ಅಧಿಕಾರಿಗಳು ಮುಂದಾಗಿದ್ದಾರೆ. ಗಾಂಧಿ ಪ್ರತಿಮೆ ವಿರೂಪವನ್ನು ಅಮೆರಿಕಾದ ಉನ್ನತ ಜನಪ್ರತಿನಿಧಿಗಳು ಕೂಡಾ ಖಂಡಿಸಿದ್ದಾರೆ. ಇದರಿಂದ ತುಂಬಾ ಬೇಸರವಾಗಿದೆ ಎಂದು ಡೊನಾಲ್ಡ್ ಟ್ರಂಪ್ ಸಲಹೆಗಾರ ಕಿಂಬರ್ಲಿ ಗಿಲ್ಫಾಯ್ಲ್ ಟ್ವೀಟ್ ಮಾಡಿದ್ದಾರೆ. ಶಾಂತಿಯುತ ಪ್ರತಿಭಟನೆ ಮೂಲಕ ಗಾಂಧಿ ಅತ್ಯುನ್ನತ ಬದಲಾವಣೆ ಮಾಡಿದ್ದಾರೆ. ಅಂತವರ ಪ್ರತಿಮೆ ವಿರೂಪಗೊಳಿಸುವುದು ನಾಚಿಗೇಡಿನ ಸಂಗತಿ ಎಂದು ಉತ್ತರ ಕಾರೊಲಿನಾ ಸೆನೆಟರ್ ಟಾಮ್ ಟಿಲ್ಲಿಸ್ ಹೇಳಿದ್ದಾರೆ. ಈ ಘಟನೆ ಬಗ್ಗೆ ಭಾರತದಲ್ಲಿನ ಅಮೆರಿಕಾ ರಾಯಭಾರಿ ಕೇನ್ ಜಸ್ಟರ್ ಕ್ಷಮೆ ಕೋರಿದ್ದಾರೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا