Urdu   /   English   /   Nawayathi

ಸಾಮರ್ಥ್ಯ ಹೆಚ್ಚಳ: ಹಾಸನ-ಮಂಗಳೂರು ಮಾರ್ಗದಲ್ಲಿ ಇನ್ನು 24 ರೈಲುಗಳ ಸಂಚಾರ ಸಾಧ್ಯತೆ

share with us

ಬೆಂಗಳೂರು: 10 ಜೂನ್ 2020 (ಫಿಕ್ರೋಖಬರ್ ಸುದ್ದಿ) ರಾಜ್ಯದ ಅರ್ಥವ್ಯವಸ್ಥೆಗೆ ಉತ್ತೇಜನ ನೀಡಲು ಹಾಸನ-ಮಂಗಳೂರು ರೈಲು ಮಾರ್ಗದ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಹಾಸನ ಮಂಗಳೂರು ರೈಲು ಅಭಿವೃದ್ಧಿ ಕಂಪೆನಿ ನಿಯಮಿತ ಸಿಗ್ನಲ್ ವ್ಯವಸ್ಥೆ ಮತ್ತು ಅನುಮತಿಯ ಕ್ರಾಸಿಂಗ್ ನ್ನು ಎರಡು ನಿಲ್ದಾಣಗಳಲ್ಲಿ ಸ್ಥಾಪಿಸಿದ್ದು ಇದರಿಂದಾಗಿ ಹಾಸನ ಮಂಗಳೂರು ರೈಲು ಮಾರ್ಗದಲ್ಲಿ ಇನ್ನು 24 ರೈಲುಗಳು ಸಂಚರಿಸಬಹುದು. ಎಡಕುಮೇರಿ ಮತ್ತು ಕಡಗಾರವಳ್ಳಿ ನಿಲ್ದಾಣಗಳಲ್ಲಿ ಕ್ರಾಸಿಂಗ್ ಗೆ ಅನುಮತಿ ನೀಡಲಾಗಿದ್ದು ಈ ಹಿಂದೆ ಒಂದು ರೈಲು ತನ್ನ ಸಂಚಾರವನ್ನು ಪೂರ್ಣಗೊಳಿಸುವವರೆಗೆ ಇನ್ನೊಂದು ರೈಲು ಹಾದು ಹೋಗಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಸಿಗ್ನಲ್ ವ್ಯವಸ್ಥೆಯಿಂದಾಗಿ ಹೆಚ್ಚಿನ ರೈಲುಗಳ ಸಂಚಾರ ಆರಂಭಿಸಬಹುದು ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತ್ ಗಾರ್ಗ್ ತಿಳಿಸಿದ್ದಾರೆ. ಸಕಲೇಶಪುರ ಮತ್ತು ಸುಬ್ರಹ್ಮಣ್ಯ ಮಧ್ಯೆ 55 ಕಿಲೋ ಮೀಟರ್ ಸಂಚಾರದಲ್ಲಿ ರೈಲಿನ ಸಂಚಾರದ ವೇಗ ಗಂಟೆಗೆ 30 ಕಿಲೋ ಮೀಟರ್ ವರೆಗೆ ಇರುತ್ತದೆ. ಪ್ರಸ್ತುತ ಈ ಮಾರ್ಗದಲ್ಲಿ ಮೂರು ಪ್ರಯಾಣಿಕ ರೈಲು ಸಂಚರಿಸುತ್ತಿದೆ ಎಂದರು. ಹೆಚ್ಚುವರಿ ರೈಲು ಗೂಡ್ಸ್ ರೈಲುಗಳಾಗಿದ್ದು ಮಂಗಳೂರಿನಿಂದ ಕರ್ನಾಟಕದ ಬೇರೆ ಬೇರೆ ಕಡೆಗಳಿಗೆ ರಸಗೊಬ್ಬರಗಳನ್ನು ಸಾಗಿಸಲು ಸಹಾಯವಾಗಲಿದೆ ಎಂದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا