Urdu   /   English   /   Nawayathi

8 ಕೋಟಿ ವಲಸಿಗರಲ್ಲಿ ಕೇವಲ 20.26 ಲಕ್ಷ ಜನರಿಗೆ ಮಾತ್ರ ತಲುಪಿದ ಆಹಾರ ಧಾನ್ಯ!

share with us

ನವದೆಹಲಿ: 08 ಜೂನ್ 2020 (ಫಿಕ್ರೋಖಬರ್ ಸುದ್ದಿ) ಕೇಂದ್ರ ಅಥವಾ ರಾಜ್ಯ ಪಡಿತರ ಚೀಟಿ ಹೊಂದಿಲ್ಲದ 8 ಕೋಟಿ ವಲಸಿಗರಲ್ಲಿ ಕೇವಲ 20.36 ಲಕ್ಷ ವಲಸೆ ಕಾರ್ಮಿಕರಿಗೆ ಮಾತ್ರ ಉಚಿತ ಆಹಾರ ಧಾನ್ಯಗಳನ್ನು ಪೂರೈಸಲಾಗಿದೆ ಎಂದು ಕೇಂದ್ರ ಆಹಾರ ಸಚಿವಾಲಯ ತಿಳಿಸಿದೆ. ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಹಸಿವಿನಿಂದ ಬಳಲುತ್ತಿರುವ 8 ಕೋಟಿ ವಲಸಿಗರಿಗೆ ಕೇಂದ್ರ ಸರ್ಕಾರವು ಪ್ರತಿ ವ್ಯಕ್ತಿಗೆ 5 ಕೆ.ಜಿ ಉಚಿತ ಆಹಾರ ಧಾನ್ಯಗಳನ್ನು ಎರಡು ತಿಂಗಳವರೆಗೆ ನೀಡಬೇಕು ಎಂದು ಮೇ 14ರಂದು ಘೋಷಿಸಿತ್ತು. ಕೇಂದ್ರ ಅಥವಾ ರಾಜ್ಯ ಪಡಿತರ ಚೀಟಿ ಇಲ್ಲದವರಿಗೆ ಉಚಿತ ಆಹಾರವನ್ನು ವಿತರಿಸಬೇಕು ಎಂದು ಆದೇಶಿಸಿತ್ತು. ಆದರೆ, ಇಲ್ಲಿ ಯವರೆಗೆ ಆ ಗುರಿ ತಲುಪಲು ಸಾಧ್ಯವಾಗಿಲ್ಲ. "ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 4.42 ಲಕ್ಷ ಟನ್ ಆಹಾರ ಧಾನ್ಯಗಳನ್ನು ಪಡೆದುಕೊಂಡಿದ್ದು, 10,131 ಟನ್ ಆಹಾರ ಧಾನ್ಯಗಳನ್ನು 20.26 ಲಕ್ಷ ಫಲಾನುಭವಿಗಳಿಗೆ ವಿತರಿಸಿದೆ" ಎಂದು ಕೇಂದ್ರ ಆಹಾರ ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا