Urdu   /   English   /   Nawayathi

ಉದ್ಯಾವರ: 26 ವರ್ಷದ ಮಹಿಳೆಯಲ್ಲಿ ಕೊರೋನ ಪಾಸಿಟಿವ್ ಪತ್ತೆ, ಮನೆ ಸಿಲ್ ಡೌನ್

share with us

ಉಡುಪಿ: 06 ಜೂನ್ 2020 (ಫಿಕ್ರೋಖಬರ್ ಸುದ್ದಿ) ಮುಂಬೈನಿಂದ ಆಗಮಿಸಿದ 26 ವರ್ಷದ ಮಹಿಳೆ ಕ್ವಾರಂಟೈನ್ ಮುಗಿಸಿ ಉದ್ಯಾವರದ ತನ್ನ ಮನೆಗೆ ಬಂದಿದ್ದು ಇದೀಗ ಕೋರೊನ ಪಾಸಿಟಿವ್ ಪತ್ತೆಯಾಗಿದೆ. ಇತ್ತೀಚೆಗಷ್ಟೇ ಮುಂಬಯಿಯಿಂದ ಆಗಮಿಸಿದ ಉದ್ಯಾವರದ ಕಲಾಯಿಬೈಲಿನ ವಿವಾಹಿತ ಮಹಿಳೆ ಸರಕಾರಿ ಆದೇಶದ ಕ್ವಾರಂಟೈನ್ ಮುಗಿಸಿ, ಉದ್ಯಾವರದ ತನ್ನ ಮನೆಗೆ ಆಗಮಿಸಿದ್ದರು. ಆದರೆ ಇದೀಗ ಅ ಮಹಿಳೆಯಲ್ಲಿ ಕೋರೋನ ಪಾಸಿಟಿವ್ ಪತ್ತೆಯಾಗಿದ್ದು, ಮಹಿಳೆ ವಾಸವಿದ್ದ ಮನೆಯನ್ನು ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ. ಉದ್ಯಾವರ ಗ್ರಾಮದಲ್ಲಿ ಪ್ರಥಮ ಕೋರೊನ ಪಾಸಿಟಿವ್ ಇದಾಗಿದ್ದು, ಸಾರ್ವಜನಿಕರು ಆತಂಕಗೊಂಡಿದ್ದಾರೆ.

ಉ, ಟೈ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا