Urdu   /   English   /   Nawayathi

ವಿದ್ಯುತ್ ಕ್ಷೇತ್ರದ ಖಾಸಗೀಕರಣ; ಹೆಸ್ಕಾಂ ನೌಕರರ‌ ಪ್ರತಿಭಟನೆ

share with us

ಕಾರವಾರ: 01 ಜೂನ್ 2020 (ಫಿಕ್ರೋಖಬರ್ ಸುದ್ದಿ) ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಕರ್ನಾಟಕ ವಿದ್ಯುತ್ ಮಂಡಳಿಯ ನೌಕರರ ಸಂಘಗಳ ಒಕ್ಕೂಟದ ಕರೆಯ ಮೇರೆಗೆ ಇಲ್ಲಿನ ಹೆಸ್ಕಾಂ ಕಚೇರಿ ಎದುರು ಸಾಂಕೇತವಾಗಿ ನೌಕರರು ಪ್ರತಿಭಟಿಸಿದರು. ಹೆಸ್ಕಾಂ ಶಿರಸಿ ವೃತ್ತದ ಕಾರವಾರ ವಿಭಾಗದ ಎಲ್ಲ ನೌಕರರು ಮತ್ತು ಅಧಿಕಾರಿ ವರ್ಗದವರು ಹಾಗೂ ಸಂಘಟನೆಯ ಹಾಲಿ ಹಾಗೂ ಮಾಜಿ ಪದಾಧಿಕಾರಿಗಳು ಕಪ್ಪು ಬಟ್ಟೆಯನ್ನು ಬಲ ಭುಜಕ್ಕೆ ಕಟ್ಟಿಕೊಂಡು ಕಾರವಾರ ಉಪವಿಭಾಗದ ಕಚೇರಿ ಆವರಣದಲ್ಲಿ ಸಾಂಕೇತಿಕವಾಗಿ ಮೌನ ಪ್ರತಿಭಟನೆ ನಡೆಸಿದರು. ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವುದರಿಂದ ನೌಕರರು ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಸಂಘಟನೆಯ ಮೂಲಕ ಒಗ್ಗಟ್ಟಾಗಿ ಯಾವುದೇ ಕಾರಣಕ್ಕೂ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಅವಕಾಶ ನೀಡಬಾರದು ಎಂದು ಪ್ರಮುಖರು ಕರೆ ನೀಡಿದರು.

ಪ್ರತಿಭಟನೆ ಯಾಕೆ?: ಇತ್ತೀಚೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ವಿದ್ಯುತ್ ಸರಬರಾಜು ಕಂಪೆನಿಗಳನ್ನು ಖಾಸಗೀಕರಣಗೊಳಿಸಿ, ವಿದ್ಯುತ್ ಕ್ಷೇತ್ರದಲ್ಲಿ ಬದಲಾವಣೆ ತರಲಾಗುವುದು ಎಂದು ಪೋಷಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ವಿದ್ಯುತ್ ತಿದ್ದುಪಡಿ ಕಾಯ್ದೆ ಜಾರಿಗೆ ತರಲು ಮುಂದಾಗಿದ್ದು, ಇದಕ್ಕೆ ರಾಜ್ಯವ್ಯಾಪಿ ವಿದ್ಯುತ್ ಸಂಸ್ಥೆಗಳ ನೌಕರರಿಂದ ವಿರೋಧ ವ್ಯಕ್ತವಾಗಿದೆ.

ನು, ಜೇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا