Urdu   /   English   /   Nawayathi

ದಕ್ಷಿಣ ಕನ್ನಡ: ಮತ್ತಿಬ್ಬರಿಗೆ ಕೋವಿಡ್-19 ದೃಢ

share with us

ಮಂಗಳೂರು: 18 ಮೇ 2020 (ಫಿಕ್ರೋಖಬರ್ ಸುದ್ದಿ) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲ್ಲೇ ಇದ್ದು, ಭಾನುವಾರ ಮತ್ತೆ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರದಿಂದ ಬಂದ 35 ವರ್ಷದ ಒಬ್ಬ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದ್ದು, 31 ವರ್ಷದ ಪುರುಷನಿಗೂ ಕೋವಿಡ್ -19 ದೃಢವಾಗಿದೆ. 31 ವರ್ಷದ ಪುರುಷ ಜಪ್ಪಿನಮೊಗರು ನಿವಾಸಿಯಾಗಿದ್ದು ಕೋವಿಡ್ -19 ಶಂಕೆಯಿಂದಾಗಿ ಆಸ್ಪತ್ರೆಗೆ ಬಂದು ಸ್ವಯಂ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಸೋಂಕು ದೃಢವಾಗಿದೆ. 35 ವರ್ಷದ ಮಹಿಳೆ ನಗರದ ಯೆಯ್ಯಾಡಿ ನಿವಾಸಿಯಾಗಿದ್ದು ಇದೇ 14 ರಂದು ಮುಂಬೈನಿಂದ ಬಂದಿದ್ದು, ಆಕೆಯ ಪತಿ ಮತ್ತು ಮಗುವಿನೊಂದಿಗೆ  ಕ್ವಾರಂಟೈನ್‌ನಲ್ಲಿದ್ದರು. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 52ಕ್ಕೆ ಏರಿದ್ದು, ಐವರು ಮಹಿಳೆಯರು ಮೃತಪಟ್ಟಿದ್ದಾರೆ. 31 ಜನರು ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 16 ಮಂದಿ ಗುಣಮುಖರಾಗಿದ್ದಾರೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا