Urdu   /   English   /   Nawayathi

12 ರಂದೇ ದುಬೈನಿಂದ ಮಂಗಳೂರಿಗೆ ವಿಮಾನ

share with us

ಮಂಗಳೂರು: 09 ಮೇ 2020 (ಫಿಕ್ರೋಖಬರ್ ಸುದ್ದಿ) ಲಾಕ್‌ಡೌನ್‌ನಿಂದಾಗಿ ದುಬೈನಲ್ಲಿ ಸಿಲುಕಿಕೊಂಡಿರುವ ರಾಜ್ಯದ ಕರಾವಳಿ ಭಾಗದ ಜನರನ್ನು ಹೊತ್ತ ಮೊದಲ ವಿಮಾನ ಎರಡು ದಿನ ಮುಂಚಿತವಾಗಿಯೇ ಅಂದರೆ ಇದೇ 12 ರಂದು ನಗರಕ್ಕೆ ಬರಲಿದೆ. ಮೊದಲು ಇದೇ 12ರಂದು ನಿಗದಿಯಾಗಿದ್ದ ದುಬೈ ಕರಾವಳಿಗರ ಏರ್ ಲಿಫ್ಟ್ ಅನ್ನು 14ಕ್ಕೆ ಮುಂದೂಡಲಾಗಿತ್ತು. ಆದರೆ ಇದೀಗ ಮತ್ತೆ ದುಬೈನಿಂದ ಮಂಗಳೂರಿಗೆ ಬರುವ ಮೊದಲ ವಿಮಾನ ಮೊದಲಿನಂತೆ ಇದೇ 12 ಕ್ಕೆ ನಿಗದಿಪಡಿಸಲಾಗಿದೆ. ’ದುಬೈನಿಂದ ಮಂಗಳೂರಿಗೆ ಇದೇ 14ರ ಬದಲಿಗೆ 12ರಂದೇ ವಿಮಾನ ಸೇವೆ ಒದಗಿಸಲು ಏರ್ ಇಂಡಿಯಾ ಒಪ್ಪಿದ್ದು, ಕನ್ನಡಿಗರು 2 ದಿನ ಮುಂಚಿತವಾಗಿಯೇ ತಾಯ್ನಾಡಿಗೆ ಮರಳಲಿದ್ದಾರೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು‘ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಟ್ವೀಟ್‌ ಮಾಡಿದ್ದಾರೆ. ಇದೇ 12 ರಂದು ಸಂಜೆ 4.10ಕ್ಕೆ ದುಬೈನಿಂದ ಈ ವಿಮಾನ ಹೊರಡಲಿದ್ದು, ಭಾರತೀಯ ಕಾಲಮಾನದಂತೆ ರಾತ್ರಿ 9.10 ಕ್ಕೆ ಮಂಗಳೂರು ತಲುಪಲಿದೆ ಎಂದು ತಿಳಿಸಿದ್ದಾರೆ. ಏರ್‌ ಇಂಡಿಯಾದ ಐಎಕ್ಸ್‌ 0384 ವಿಮಾನವು 180 ಜನರನ್ನು ದುಬೈನಿಂದ ಕರೆತರಲಿದೆ. ಇದರಿಂದಾಗಿ ದುಬೈನಲ್ಲಿರುವ ಕರಾವಳಿಯ ಜನರಲ್ಲಿ ಉಂಟಾಗಿದ್ದ ಆತಂಕ ನಿವಾರಣೆ ಆದಂತಾಗಿದೆ. ಮೊದಲ ವಿಮಾನದಲ್ಲಿ ಗರ್ಭಿಣಿಯರು, ಹಿರಿಯ ನಾಗರಿಕರು, ಮಕ್ಕಳು, ತುರ್ತು ವೈದ್ಯಕೀಯ ನೆರವಿನ ಅಗತ್ಯ ಇರುವವರಿಗೆ ಆದ್ಯತೆ ನೀಡಲಾಗುತ್ತಿದೆ. ಇನ್ನೊಂದು ವಿಮಾನ ಶೀಘ್ರದಲ್ಲಿಯೇ ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರಲಿದೆ. ಅದರ ದಿನಾಂಕವನ್ನೂ ಇನ್ನೂ ನಿಗದಿಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا