Urdu   /   English   /   Nawayathi

ಪತ್ರಿಕಾ ಪ್ರಕಟಣೆ

share with us

ಭಟ್ಕಳ: 27 ಏಪ್ರಿಲ್ 2020 (ಫಿಕ್ರೋಖಬರ್ ಸುದ್ದಿ) ಭಟ್ಕಳ-ಹೊನ್ನಾವರ ಕ್ಷೇತ್ರದ ಶಾಸಕರಾದ ಶ್ರೀ ಸುನಿಲ್ ಬಿ. ನಾಯ್ಕರವರು ಕೋವಿಡ್-19 ಕೊರೋನಾ ವೈರಾಣು ಸೋಂಕಿನಿಂದ ದಿಕ್ಕೆಟ್ಟಿರುವ ಸಮಾಜದ ವಿವಿಧ ಸ್ತರದ ಜನತೆಯನ್ನು ಗುರುತಿಸಿ ತನ್ನಿಂದಾದ ಸಹಾಯ ಸಹಕಾರದ ಜೊತೆಗೆ ದಾನಿಗಳು, ಸಂಘಸಂಸ್ಥೆಗಳ ಮುಲಕವೂ ನೆರವಿಗಾಗಿ ಮನವಿ ಮಾಡಿಕೊಂಡಂತೆ ಜಿಲ್ಲೆಯಲ್ಲಿ ಆರೋಗ್ಯ ಸೇವೆಯ ಜೊತೆಗೆ ವಿವಿಧ ರಂಗದಲ್ಲಿ ಗುರುತಿಸಿಕೊಂಡಿರುವ ಶಿರಸಿಯ ಸ್ಕೋಡ್‍ವೆಸ್ ಸೇವಾ ಸಂಸ್ಥೆಯವರು, ವಿಪ್ರೋದ  ಅಜೀಮ್ ಪ್ರೇಮ್‍ಜಿ ಫಿಲಾಂತರೋಪಿಕ್ ಇನಿಟಿಯೆಟರಿವ್ಸ್ ರವರು ಪ್ರಾಯೋಜಿಸಿದ ಸುಮಾರು 10 ಲಕ್ಷ ರೂ. ಮೌಲ್ಯದ ಆಹಾರ ದಾನ್ಯಗಳ ಕಿಟ್‍ನ್ನು ಕ್ಷೇತ್ರದ 737 ಎಂಡೋಸೆಲ್ಪಾನ್ ಪಿಡಿತರಿಗೆ ನೀಡಲು ಮುಂದೆ ಬಂದಿದ್ದಾರೆ. ದಿನಾಂಕ 29.04.2020 ಬುಧವಾರ ಬೆಳಿಗ್ಗೆ ಶಿರಾಲಿಯಲ್ಲಿ ಸ್ಕೋಡ್‍ವೆಸ್ ಸಂಸ್ಥೆಯ ಅಧ್ಯಕ್ಷರು, ಶಿರಸಿ ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷರಾದ ಶ್ರೀ ವೆಂಕಟೇಶ ನಾಯ್ಕ ಹಾಗೂ ತಾಲ್ಲೂಕ ಆಡಳಿತದ ಪ್ರಮುಖರ ಸಮ್ಮೂಖದಲ್ಲಿ ಶಾಸಕರಾದ ಶ್ರೀ ಸುನಿಲ್ ಬಿ. ನಾಯ್ಕ ರವರು ಆಹಾರ ದಾನ್ಯದ ಕಿಟ್‍ನ್ನು ಪೀಡಿತರಿಗೆ ಸಾಂಕೇತಿಕವಾಗಿ ವಿತರಿಸಿ ಚಾಲನೆ ನೀಡಲಿದ್ದಾರೆ.
ಭಟ್ಕಳ ತಾಲ್ಲೂಕಿನ 10 ಗ್ರಾಮ ಪಂಚಾಯತದ, ಪುರಸಭೆ, ಪಟ್ಟಣಪಂಚಾಯತ ವ್ಯಾಪ್ತಿಯಲ್ಲದೇ ಹೊನ್ನಾವರದ ಬಳಕೂರು ಬಾಗದಲ್ಲು ಎಂಡೋಸಲ್ಪಾನ್ ದ್ರಾವಣ ಸಿಂಪರಣೆಯ ಪರಿಣಾಮ ಅಂಗವೈಕಲ್ಯ, ಬುದ್ಧಿ ಮಾಂದ್ಯತೆಗೊಳಗಾದವರಿದ್ದು ಈ ಹಿಂದೆ ಸರಕಾರ ವಿವಿಧ ಗ್ರಾಮ ಪಂಚಾಯತ ಮಟ್ಟದಲ್ಲಿ ಕ್ಯಾಂಪ್‍ಗಳ ಮೂಲಕ ಎಂಡೋಸಲ್ಪಾನ್ ಪೀಡಿತರನ್ನ ಗುರುತಿಸುವ ಕಾರ್ಯ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಭಟ್ಕಳ-ಹೊನ್ನಾವರ ಕ್ಷೇತ್ರದಲ್ಲಿ ಒಟ್ಟು 737 ಜನರನ್ನು ಗುರುತಿಸಿ ಗುರುತು ಪತ್ರ ನೀಡಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ಮಾಸಾಸನದಲ್ಲೂ ಹೆಚ್ಚಳ ಮಾಡಲಾಗಿತ್ತು.
    ಭಟ್ಕಳ-ಹೊನ್ನಾವರ ಕ್ಷೇತ್ರದಲ್ಲಿ ಎಂಡೋಸಲ್ಪಾನ್ ಪೀಡಿತರಿರುವದನ್ನ ಅರಿತಿದ್ದ ಶಾಸಕ ಶ್ರೀ ಸುನಿಲ್ ಬಿ. ನಾಯ್ಕ ರವರು ಪೀಡಿತರೊಂದಿಗೆ ಸಂಪರ್ಕದಲ್ಲಿದ್ದ ಶಿರಸಿಯ ಸ್ಕೋಡ್‍ವೆಸ್ ಸೇವಾ ಸಂಸ್ಥೆರವರನ್ನ ದಿನಾಂಕ:17.04.2020 ರಂದು ಪತ್ರ ಮುಖೇನ ಸಂಪರ್ಕಿಸಿ ತನ್ನ ನೇರವಿನ ಅಭಿಯಾನದಲ್ಲಿ ಕೈ ಜೊಡಿಸುವಂತೆ ವಿನಂತಿಸಲಾಗಿತ್ತು. ತಕ್ಷಣ ಸ್ಪಂದಿಸಿದ ಅಧ್ಯಕ್ಷರಾದ ಶ್ರೀ ವೆಂಕಟೇಶ ನಾಯ್ಕ ರವರು ಪ್ರಾಯೋಜಕರನ್ನ ಗುರುತಿಸಿ ಭಟ್ಕಳ-ಹೊನ್ನಾವರ ಕ್ಷೇತ್ರದ ಎಂಡೋಸಲ್ಪಾನ ಪೀಡಿತರಿಗೆ ಬಹುದೊಡ್ಡ ನೆರವಿನ ಹಸ್ತ ಚಾಚಿದ್ದಕ್ಕಾಗಿ ಶಾಸಕರು ಸಂಸ್ಥೆಯವರನ್ನ ಅಭಿನಂದಿಸಿದ್ದಾರೆ.
    ದಿನಾಂಕ: 29.04.2020 ಬುಧವಾರ ಮತ್ತು ದಿನಾಂಕ: 30.04.2020 ಗುರುವಾರ ಆಯ್ದ ಸ್ಥಳದಲ್ಲಿ ದಿನಸಿ ಕಿಟ್‍ನ್ನು ವಿತರಿಸಲು ವೇಳಾ ಪಟ್ಟಿ ಸಿದ್ದಪಡಿಸಿದ್ದು ಆಯಾ ಭಾಗದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಮೂಲಕ ಮಾಹಿತಿ ನೀಡಿ ಸ್ಥಳಕ್ಕೆ ತೆರಳಿ ವಿತರಿಸಲು ಯೋಜಿಸಿದ್ದು, ತಾಲ್ಲೂಕ ಆಡಳಿತ ಈ ಅಭಿಯಾನದಲ್ಲಿ ಸಹಕರಿಸಲು ಶಾಸಕರು ಕೋರಿದ್ದಾರೆ.

Prayer Timings

Fajr فجر
Dhuhr الظهر
Asr أسر
Maghrib مغرب
Isha عشا