Urdu   /   English   /   Nawayathi

ಬೆಂಗಳೂರು: ಕಾರುಗಳ ಮೇಲೆ ಬಿದ್ದ ಬೃಹತ್ ಮರ, ತಪ್ಪಿದ ಭಾರೀ ಅನಾಹುತ

share with us

ಬೆಂಗಳೂರು: 26 ಏಪ್ರಿಲ್ 2020 (ಫಿಕ್ರೋಖಬರ್ ಸುದ್ದಿ) ಭಾನುವಾರ ಬೆಳ್ಳಂಬೆಳಗ್ಗೆ ‌ಏಕಾಏಕೀ ಬೃಹತ್ ಗಾತ್ರದ ಮರವೊಂದು ವಾಹನಗಳ ಮೇಲೆ ಬಿದ್ದ ಘಟನೆ‌‌ ಸಿಲಿಕಾನ್ ಸಿಟಿಯ ಗಿರಿನಗರದಲ್ಲಿ ನಡೆದಿದೆ‌. ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಕಾರೊಂದು ಸಂಪೂರ್ಣ ಜಖಂ ಆಗಿದ್ದು, ಇನ್ನೊಂದು ಭಾಗಶಃ ಜಖಂ ಆಗಿದೆ. ಆದರೆ, ಅದೃಷ್ಟವಶಾತ್ ರಸ್ತೆಯಲ್ಲಿ ಯಾರು ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನೆಲ ತೇವವಾಗಿದ್ದರಿಂದ ಮೋರಿಯಲ್ಲಿ ಬೇರು ಬಿಟ್ಟಿದ್ದ ಮರ ಬುಡ ಹಾಗೂ ಕಲ್ಲು ಚಪ್ಪಡಿಗಳ ಸಮೇತ ರಸ್ತೆಗೆ ಉರುಳಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا