Urdu   /   English   /   Nawayathi

ಮಹಾರಾಷ್ಟ್ರದಿಂದ ಕಡಬಕ್ಕೆ ಬಂದ ಯುವಕನಿಗೆ ಹೋಂ ಕ್ವಾರಂಟೈನ್​ನಲ್ಲಿರಲು ಸೂಚನೆ​​

share with us

ಕಡಬ (ದಕ್ಷಿಣ ಕನ್ನಡ): 25 ಏಪ್ರಿಲ್ 2020 (ಫಿಕ್ರೋಖಬರ್ ಸುದ್ದಿ) ಮಹಾರಾಷ್ಟ್ರದ ಪುಣೆಯಿಂದ ಕ್ವಾರಂಟೈನ್​​ ಮುಗಿಸಿ ಕಡಬ ಪೇಟೆಯ ಸಮೀಪದ ಹಳೆಸ್ಟೇಷನ್ ಎಂಬಲ್ಲಿಗೆ ಇಂದು ಆಗಮಿಸಿದ ಯುವಕನಿಗೆ ಪುನಃ 28 ದಿನ ಹೋಂ ಕ್ವಾರಂಟೈನ್​ನಲ್ಲಿರುವಂತೆ ಸೂಚನೆ ನೀಡಲಾಗಿದೆ. ಕಡಬ ಪೇಟೆಗೆ ಸಮೀಪದ ಹಳೆಸ್ಟೇಷನ್ ನಿವಾಸಿ ಯುವಕನೋರ್ವ ಮಹಾರಾಷ್ಟ್ರದ ಪುಣೆಯಲ್ಲಿ ಉದ್ಯೋಗದಲ್ಲಿದ್ದು, ಪುಣೆಯ ಸಮೀಪದ ವಿಜಯಪುರದಲ್ಲಿ ಕ್ವಾರಂಟೈನ್​ನಲ್ಲಿದ್ದ ಎನ್ನಲಾಗಿದೆ. ಅಲ್ಲಿಯ ಕ್ವಾರಂಟೈನ್ ಅವಧಿ ಮುಗಿದ ಬಳಿಕ ಅಲ್ಲಿಯ ಅಧಿಕಾರಿಗಳಿಂದ ಅನುಮತಿ ಪಡೆದು ಇಂದು ಏ. 25ರಂದು ಮುಂಜಾನೆ ಕಡಬಕ್ಕೆ ತಲುಪಿದ್ದ. ಈ ಸುದ್ದಿ ತಿಳಿದ ಸಾರ್ವಜನಿಕರು ಕೂಡಲೇ ಕಡಬ ಸಮುದಾಯ ಆಸ್ಪತ್ರೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಗ್ಯ ಸಹಾಯಕಿ ರಾಜೇಶ್ವರಿ, ಕಡಬ ಠಾಣಾ ಎಎಸ್​ಐ ರವಿ, ಯವಕನ ಮನೆಗೆ ಭೇಟಿ ನೀಡಿ ಸೀಲ್ ಹಾಕಿ 28 ದಿನಗಳ ಕಾಲ ಹೋಂ ಕ್ವಾರಂಟೈನ್​ನಲ್ಲೇ ಮುಂದುವರೆಯುವಂತೆ ಸೂಚನೆ ನೀಡಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا