Urdu   /   English   /   Nawayathi

ಅಕ್ರಮವಾಗಿ ಮೀನು ಹಿಡಿಯುತ್ತಿದ್ದವರನ್ನು ಹಿಡಿಯಲು ಹೋದವರೇ ನೀರು ಪಾಲು... ಇಬ್ಬರು ಸಿಬ್ಬಂದಿ ಸಾವು

share with us

ಮೈಸೂರು: 25 ಏಪ್ರಿಲ್ 2020 (ಫಿಕ್ರೋಖಬರ್ ಸುದ್ದಿ) ಅಕ್ರಮವಾಗಿ ಮೀನು ಹಿಡಿಯುತ್ತಿದ್ದವರನ್ನು ಹಿಡಿಯಲು ಹೋಗಿ ಅರಣ್ಯ ಇಲಾಖೆಯ ಇಬ್ಬರು ನೌಕರರು ನೀರು ಪಾಲಾಗಿರುವ ಘಟನೆ ಹೆಚ್‌.ಡಿ.ಕೋಟೆ ತಾಲೂಕಿನ ಕಬಿನಿ ಹಿನ್ನೀರು ಪ್ರದೇಶದಲ್ಲಿ ನಡೆದಿದೆ. ಅರಣ್ಯ ಇಲಾಖೆಯ ನೌಕರರಾದ ಶಿವಕುಮಾರ್ ಮತ್ತು ಮಹೇಶ ಮೃತ ಸಿಬ್ಬಂದಿ. ಎನ್. ಬೇಗೂರಿನ ಗುಂಡ್ರೆ ಅರಣ್ಯ ಪ್ರದೇಶದ ಕಬಿನಿ ಹಿನ್ನೀರಿನಲ್ಲಿ ಅಕ್ರಮವಾಗಿ ಮೀನು ಹಿಡಿಯುತ್ತಿದ್ದಾರೆ ಎಂಬ ಸುದ್ದಿ ತಿಳಿದು, ಮೀನುಗಾರರನ್ನು ಹಿಡಿಯಲು ಅರಣ್ಯ ಸಿಬ್ಬಂದಿ ಹೋಗಿದ್ದರು. ಗಾಳಿಯಲ್ಲಿ ಗುಂಡು ಹಾರಿಸಿ ಅವರನ್ನು ಹಿಡಿಯಲು ಹೋಗುತ್ತಿದ್ದಾಗ, ಅರಣ್ಯ ಇಲಾಖೆಯ ನಾಲ್ವರು ಸಿಬ್ಬಂದಿ ಇದ್ದ ಹರಿಗೋಲನ್ನೇ ಕಳ್ಳರು ಮುಳುಗಿಸಿದ್ದಾರೆ. ಆಗ ತಕ್ಷಣ ಇಬ್ಬರು ಈಜಿ ದಡ ಸೇರಿದ್ರೆ, ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

Forest department officers died in Mysore

ಶಿವಕುಮಾರ್ ಮೃತದೇಹ

ಘಟನೆಯಲ್ಲಿ ಅರಣ್ಯ ಇಲಾಖೆಗೆ ಸೇರಿದ ಬಂದೂಕು ಸಹ ನೀರು ಪಾಲಾಗಿದೆ. ಶಿವಕುಮಾರ್ ಎಂಬುವರ ಮೃತದೇಹ ಪತ್ತೆಯಾಗಿದ್ದು, ಮಹೇಶ್ ಮೃತದೇಹಕ್ಕೆ ಶೋಧ ಕಾರ್ಯ ನಡೆಯುತ್ತಿದೆ. ಸ್ಥಳಕ್ಕೆ ಡಿವೈಎಸ್‌ಪಿ ಸುಂದರ್‌ರಾಜ್ ಸೇರಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಚುರುಕುಗೊಳಿಸಿದ್ದಾರೆ. ಸದ್ಯ ಈ ಸಂಬಂಧ ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا