Urdu   /   English   /   Nawayathi

ಲಾಕ್ ಡೌನ್ ಎಫೆಕ್ಟ್: ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುತ್ತಿರುವ ನಾಯಿಗಳು ಮತ್ತು ಮನುಷ್ಯರು

share with us

ಬೆಂಗಳೂರು: 25 ಏಪ್ರಿಲ್ 2020 (ಫಿಕ್ರೋಖಬರ್ ಸುದ್ದಿ) ಲಾಕ್ ಡೌನ್ ಹಿನ್ನೆಲೆಯಲ್ಲಿ ಜನರು ಮತ್ತು ನಾಯಿಗಳು ಜಿಂಕೆ, ಬ್ಲ್ಯಾಕ್ ಬಕ್ಸ್,ಇಲಿ ಜಿಂಕೆ, ಕಾಡು ಹಂದಿ, ಆಮೆ, ನವಿಲು ಮುಂತಾದ ಕಾಡು ಪ್ರಾಣಿಗಳನ್ನು ರಕ್ಷಣೆ ಮಾಡುವ ಬದಲು ಕೊಂದು ತಿನ್ನುತ್ತಿದ್ದಾರೆ. ಎಲ್ಲಾ ಅಂಗಡಿಗಳು ಹೋಟೆಲ್ಗಳು ಮುಚ್ಚಿರುವುದರಿಂದ ನಾಯಿಗಳಿಗೆ ಎಲ್ಲಿಯೂ ಆಹಾರ ಸಿಗದ ಕಾರಣ ಕಾಡು ಪ್ರಾಣಿಗಳನ್ನು ಕೊಂದು ತಿನ್ನಲು ಮುಂದಾಗಿವೆ. ಕಳೆದ 10 ದಿನಗಳಲ್ಲಿ ಕರ್ನಾಟಕದಲ್ಲಿ  ಕಾಡು ಪ್ರಾಣಿಗಳ ಬೇಟೆ ಹೆಚ್ಚಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರೀಯ ಉದ್ಯಾನವನಗಳು, ವನ್ಯಜೀವಿ ಅಭಯಾರಣ್ಯಗಳು ಮತ್ತು ಮೀಸಲು ಕಾಡುಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀದಿ ನಾಯಿಗಳು ಮತ್ತು ಜನರಿಂದ ಹುಲ್ಲೆ ಮತ್ತು ಕಾಡುಹಂದಿಗಳನ್ನು ಕೊಲ್ಲುವ ಪ್ರಮಾಣ ತೀವ್ರವಾಗಿ ಏರಿಕೆಯಾಗಿದೆ. ಬೆಂಗಳೂರು, ತುಮಕೂರು, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಚಾಮರಾಜನಗರ ಮತ್ತು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಇಂಥಹ ಘಟನೆಗಳು ವರದಿಯಾಗಿವೆ. ಪರಿಸ್ಥಿತಿ ಸಾಕಷ್ಟು ಆತಂಕಕಾರಿಯಾಗಿದೆ ಎಂದು ವನ್ಯಜೀವಿ ತಜ್ಞರು ಮತ್ತು ಅರಣ್ಯ ಅಧಿಕಾರಿಗಳು ಹೇಳಿದ್ದು ಹಲವು ಮಂದಿಯನ್ನು ಬಂಧಿಸಿದ್ದಾರೆ. ನಗರದಿಂದ ಹಳ್ಳಿಗಳಿಗೆ ಬಂದಿರುವ ಹಲವು ಯುವಕರು ಅಭಯಾರಣ್ಯದಲ್ಲಿ ನಾಯಿಗಳನ್ನು ಬಳಸಿಕೊಂಡು ಕಾಡು ಪ್ರಾಣಿಗಳನ್ನು ಬೇಟೆಯಾಡಲಾಗುತ್ತಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا