Urdu   /   English   /   Nawayathi

ಉಪ್ಪಿನಂಗಡಿ ಸೋಂಕಿತ ವ್ಯಕ್ತಿಯ ಪತ್ನಿಗೂ ಕೊರೊನಾ!

share with us

ಮಂಗಳೂರು: 19 ಏಪ್ರಿಲ್ 2020 (ಫಿಕ್ರೋಖಬರ್ ಸುದ್ದಿ) ದ.ಕ ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ‌ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.

order copy

ಏ. 16ರಂದು ಕೊರೊನಾ ಸೋಂಕಿತ ಉಪ್ಪಿನಂಗಡಿ ನಿವಾಸಿ ಪತ್ನಿಗೂ ಸೋಂಕು ತಗುಲಿದ್ದು, 30 ವರ್ಷ ವಯಸ್ಸಿನ ಈ ಮಹಿಳೆಯನ್ನು ಮಂಗಳೂರಿನ ವೆನ್​ಲಾಕ್​ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ‌. ಮಾ. 27ರಂದು ದೆಹಲಿಯಿಂದ ಬಂದಿದ್ದ ಉಪ್ಪಿನಂಗಡಿ ನಿವಾಸಿಯನ್ನು ಜಿಲ್ಲಾಡಳಿತ ಏ. 1ರಂದು ಪತ್ತೆ ಮಾಡಿ ಆಸ್ಪತ್ರೆಯಲ್ಲಿ ಕ್ವಾರಂಟೈನ್​​ನಲ್ಲಿ ಇರಿಸಿತ್ತು. ಏ. 17ರಂದು ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಪತಿಯನ್ನು ನೋಡಿಕೊಳ್ಳುತ್ತಿದ್ದ ಆತನ ಪತ್ನಿಗೂ ಸೋಂಕು ತಗುಲಿದೆ. ದಂಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕು ತಗುಲಿದವರ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, ಇಂದು ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಈವರೆಗೆ 12 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا