Urdu   /   English   /   Nawayathi

ಮಂಗಳೂರು: 80 ಕೈದಿಗಳ ಸ್ಥಳಾಂತರ

share with us

ಮಂಗಳೂರು: 18 ಏಪ್ರಿಲ್ 2020 (ಫಿಕ್ರೋಖಬರ್ ಸುದ್ದಿ) ಕೊರೊನಾ ವೈರಸ್ ಹರಡದಂತೆ ಅಂತರ ಕಾಪಾಡಬೇಕಾದ ಅನಿವಾರ್ಯತೆ ಇರುವುದರಿಂದ ಮಂಗಳೂರು ಕಾರಾಗೃಹದ ಕೈದಿಗಳನ್ನು ಸ್ಥಳಾಂತರ ಮಾಡಲಾಗಿದೆ. ಸದ್ಯ ಮಂಗಳೂರು ಕಾರಾಗೃಹದಲ್ಲಿ 6 ಮಹಿಳೆಯರು ಸೇರಿದಂತೆ 311 ಮಂದಿ ಕೈದಿಗಳಿದ್ದಾರೆ. ಆದರೆ ಇಲ್ಲಿ 210 ಕೈದಿಗಳನ್ನು ಇರಿಸುವುದು ಸಾಧ್ಯವಾಗಲಿದೆ. ಹಾಗಾಗಿ ವಿಚಾರಣಾಧೀನ 80 ಕೈದಿಗಳನ್ನು ರಾಜ್ಯದ ಬೇರೆ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ ಎಂದು ಜೈಲಾಧಿಕಾರಿಗಳು ತಿಳಿಸಿದ್ದಾರೆ. 40 ಜನರಂತೆ 2 ಬಸ್‌ಗಳ ಮೂಲಕ ಕಾರವಾರ ಹಾಗೂ ಚಿಕ್ಕಮಗಳೂರು ಕಾರಾಗೃಹಕ್ಕೆ ಪೊಲೀಸ್‌ ಬಂದೋಬಸ್ತ್‌ನಲ್ಲಿ ಕೈದಿಗಳನ್ನು ಸ್ಥಳಾಂತರಿಸಲಾಗಿದೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا