Urdu   /   English   /   Nawayathi

ಭಟ್ಕಳದಲ್ಲಿ ಮತ್ತೊಂದು ಕರೊನಾ ಪಾಸಿಟಿವ್: ಸೋಂಕಿತ ಮಹಿಳೆಯ ಪತಿಗೂ ಕರೊನಾ ದೃಢ

share with us

ಉತ್ತರ ಕನ್ನಡ ಜಿಲ್ಲೆ: 16 ಏಪ್ರಿಲ್ 2020 (ಫಿಕ್ರೋಖಬರ್ ಸುದ್ದಿ) ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ಸೊಂಕಿತರ ಸಂಖ್ಯೆ ಹೆಚ್ಚಾಗಿದ್ದು, ಇಂದು ಭಟ್ಕಳದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ. 36 ವರ್ಷದ ದುಬೈ ನಿಂದ ಭಟ್ಕಳಕ್ಕೆ ಬಂದು 14 ದಿನ ಹೋಮ್ ಕೊರಂಟೈನ್ ಮುಗಿಸಿದ್ದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಬಂದಿರುವುದು ದೃಡಪಟ್ಟಿದೆ. ಈ‌ ಮೊದಲು ಕೊರೋನಾ ಪಾಸಿಟಿವ್ ದೃಡಪಟ್ಟಿದ್ದ ಗರ್ಭಿಣಿಯ ಗಂಡನೇ ಇಂದು ಪಾಸಿಟಿವ್ ಬಂದ ವ್ಯಕ್ತಿಯಾಗಿದ್ದಾನೆ. ದುಬೈ ನಿಂದ 17 ನೇ ತಾರೀಕಿನಂದು ಬಾಂಬೆಗೆ ಬಂದು ಮುಂಬೈನಿಂದ ಮತ್ಸ್ಯಗಂಧ ರೈಲಿನ ಮೂಲಕ ಮಾ.21ಕ್ಕೆ ಭಟ್ಕಳ ರೈಲ್ವೆ ನಿಲ್ದಾಣಕ್ಕೆ ಬಂದಿಳಿದು ಅಲ್ಲಿಂದ ಸಂಬಂಧಿ ಸ್ಕೂಟರ್ ನಲ್ಲಿ ಮನೆಗೆ ತೆರಳಿದ್ದ ಈತ ತನ್ನ ಇಬ್ಬರು ಚಿಕ್ಕ ಮಕ್ಕಳು, ಪತ್ನಿ, ತಾಯಿ, ಸಂಬಂಧಿ ಜೊತೆ ಸಂಪರ್ಕ ಬೆಳಸಿದ್ದ. 14 ದಿನ ಕೊರಂಟೈನ್ ಮುಗಿಸಿದ್ದ ಈತ ನಗರದಲ್ಲಿ ಓಡಾಡುತಿದ್ದಾಗ ಜನರ ಈತನ ಕೈಮೇಲಿನ ಸೀಲ್ ನೋಡಿ ದೂರು ನೀಡಿದ್ದರು. ಇದರ ಆಧಾರದಲ್ಲಿ ಈತನನ್ನು ಬಂಧಿಸಿ ಕೊರಂಟೈನ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಈತನ ಗರ್ಭಿಣಿ ಪತ್ನಿಗೆ ಸೊಂಕು ಪತ್ತೆಯಾಗಿತ್ತು.

ಸ, ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا