Urdu   /   English   /   Nawayathi

ಉಡುಪಿ: ರಸ್ತೆಗೆ ನೋಟು ಎಸೆದು ಪರಾರಿಯಾದ ಯುವಕ, ಆತಂಕಗೊಂಡ ಸ್ಥಳೀಯರು

share with us

ಉಡುಪಿ: 13 ಏಪ್ರಿಲ್ 2020 (ಫಿಕ್ರೋಖಬರ್ ಸುದ್ದಿ) ನಗರದ ವಾದಿರಾಜ ರಸ್ತೆಯಲ್ಲಿ ಸೋಮವಾರ ಬೈಕ್‌ನಲ್ಲಿ ಬಂದ ಯುವಕನೊಬ್ಬ ನೋಟುಗಳನ್ನು ಎರಚಿ ಪರಾರಿಯಾಗಿದ್ದು, ಸ್ಥಳೀಯ ನಿವಾಸಿಗಳು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು. ರಸ್ತೆಯ ಮೇಲೆ ಎಲ್ಲೆಂದರಲ್ಲಿ ಬಿದ್ದಿದ್ದ ನೋಟುಗಳನ್ನು ಕಂಡು ಭಯಗೊಂಡ ನಾಗರಿಕರು ನಗರ ಠಾಣೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿದಾಗ ನೋಟುಗಳು ನಕಲಿ ಎಂಬದು ತಿಳಿದುಬಂತು. ಈಚೆಗೆ ಸಾಮಾಜಿಕ ಜಾಲತಾಣದಲ್ಲಿ ಕೋವಿಡ್ ಸೋಂಕಿತರು ನೋಟುಗಳಿಗೆ ಎಂಜಲು ಹಚ್ಚಿ ರಸ್ತೆಗೆ ಬಿಸಾಡುತ್ತಿರುವ ವಿಡಿಯೋವನ್ನು ನೋಡಿ, ಸ್ಥಳೀಯರು ಆತಂಕಗೊಂಡು ಕರೆ ಮಾಡಿದ್ದರು. ನೋಟುಗಳು ಅಸಲಿಯಲ್ಲ. ಮಕ್ಕಳು ಪ್ರಾಜೆಕ್ಟ್‌ ವರ್ಕ್‌ಗೆ ಹಾಗೂ ಆಟವಾಡಲು ಬಳಸುವ ನೋಟುಗಳಾಗಿವೆ. ಈ ಸಂಬಂಧ ದೂರು ದಾಖಲಿಸಿಕೊಂಡು ಆರೋಪಿ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ನಗರ ಠಾಣೆ ಪೊಲೀಸರು ಮಾಹಿತಿ ನೀಡಿದರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا