Urdu   /   English   /   Nawayathi

ವಿದ್ಯುತ್ ಬಿಲ್ ಕಟ್ಟಲು ಯಾವುದೇ ರಿಯಾಯಿತಿ ಇಲ್ಲ...ಜೆಸ್ಕಾಂ ಸ್ಪಷ್ಟನೆ

share with us

ಸೇಡಂ (ಕಲಬುರಗಿ): 13 ಏಪ್ರಿಲ್ 2020 (ಫಿಕ್ರೋಖಬರ್ ಸುದ್ದಿ) ಕೊರೊನಾ ಭೀತಿ ಆರಂಭವಾದ ಬೆನ್ನಲ್ಲೇ ಬಾಡಿಗೆದಾರರಿಂದ ಮನೆ ಬಾಡಿಗೆಗೆ ಬಲವಂತ ಮಾಡುವಂತಿಲ್ಲ, ಸಾಲಗಾರರು ಬ್ಯಾಂಕಿನಲ್ಲಿ ಮೂರು ತಿಂಗಳ ಕಾಲ ಕಂತು ಕಟ್ಟುವ ಅಗತ್ಯವಿಲ್ಲ ಎಂದು ಸರ್ಕಾರ ಕೆಲವೊಂದು ರಿಯಾಯಿತಿ ನೀಡಿತ್ತು. ಆದರೆ ಇದು ವಿದ್ಯುತ್ ಬಿಲ್ ಪಾವತಿದಾರರಿಗೆ ಅನ್ವಯವಾಗುವುದಿಲ್ಲ. ವಿದ್ಯುತ್ ಬಿಲ್ ಪಾವತಿ ಮಾಡಲು ಯಾವುದೇ ರೀತಿಯ ವಿನಾಯಿತಿ ಇರುವುದಿಲ್ಲ ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾದ ಎ.ಹೆಚ್. ಮುಮ್ತಾಜ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ವಿಡಿಯೋ ಸಂದೇಶದ ಮೂಲಕ ಗ್ರಾಹಕರಲ್ಲಿ ಮನವಿ ಮಾಡಿರುವ ಅವರು, ವಿದ್ಯುತ್ ಬಿಲ್ ಪಾವತಿ ಮಾಡಲು ಅಂತರ್ಜಾಲದ ಸಹಾಯ ಪಡೆಯುವಂತೆ ಕೋರಿದ್ದಾರೆ. ಕೋವಿಡ್ -19 ಹಿನ್ನೆಲೆಯಲ್ಲಿ 144 ಸೆಕ್ಷನ್ ಜಾರಿ ಇರುವುದರಿಂದ ಸರಾಸರಿ ಬಿಲ್​​​​​​ ಆಧಾರದ ಮೇಲೆ ಗ್ರಾಹಕರ ಮೊಬೈಲ್ ಸಂಖ್ಯೆಗೆ ಎಸ್​​​ಎಂಎಸ್​​​​ ಕಳಿಸಲಾಗಿದೆ. ಅದರಂತೆ ಏಪ್ರಿಲ್​​​​​ ತಿಂಗಳ ಬಿಲ್ ಪಾವತಿಸಬೇಕು. ವಿದ್ಯುತ್ ಬಿಲ್ ಕಟ್ಟಲು ಯಾವುದೇ ರಿಯಾಯಿತಿ ಇರುವುದಿಲ್ಲ, ತಡವಾಗಿ ಬಿಲ್ ಪಾವತಿ ಮಾಡಿದ್ದಲ್ಲಿ ಬಡ್ಡಿ ಸೇರಿಸಲಾಗುತ್ತದೆ. ಅದಕ್ಕಾಗಿ ಹೆಚ್ಚಿನ ಹೊಣೆ ತಪ್ಪಿಸಿಕೊಳ್ಳಲು ಗ್ರಾಹಕರು www.gescom.in ಅಥವಾ paytm, Phonepe, google pay, amazone, Bhimapp, BBPS/UPI ಮುಖಾಂತರ ಅಥವಾ ಬ್ಯಾಂಕ್ ವೆಬ್​​​​​​​ಸೈಟ್ ಮುಖಾಂತರ ಇಲ್ಲವಾದಲ್ಲಿ ಖುದ್ದು ಜೆಸ್ಕಾಂ ಕಚೇರಿ ಇಲ್ಲವೇ ಗ್ರಾಮ ಪಂಚಾಯತ್​​​​ ಕಚೇರಿಗಳಿಗೆ ತೆರಳಿ ಸಾಮಾಜಿಕ ಅಂತರ ಕಾಪಾಡಿಕೊಂಡು ಬಿಲ್ ಪಾವತಿಸುವಂತೆ ಎ.ಹೆಚ್. ಮುಮ್ತಾಜ್ ಕೋರಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا