Urdu   /   English   /   Nawayathi

ಲಾಕ್‌‌ಡೌನ್ ಎಫೆಕ್ಟ್: ಒಬ್ಬನೇ ಇರಲು ಬೋರ್, ಸೂಟ್‌ಕೇಸ್‌‌ನಲ್ಲಿ ಸ್ನೇಹಿತ ಕರೆತಂದಾತ ಮಂಗಳೂರಿನಲ್ಲಿ ಪೊಲೀಸರ ಅತಿಥಿ

share with us

ಮಂಗಳೂರು: 12 ಏಪ್ರಿಲ್ 2020 (ಫಿಕ್ರೋಖಬರ್ ಸುದ್ದಿ) ಮಾರಕ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಏಪ್ರಿಲ್ 30ರವರೆಗೂ ಲಾಕ್ ಡೌನ್ ಹೇರಿದೆ. ಇದರ ನಡುವೆಯೇ ಮಂಗಳೂರಿನಲ್ಲಿ ಓರ್ವ ಭೂಪ ಮನೆಯಲ್ಲಿ ತಾನೊಬ್ಬನೇ ಇರಲು ಬೋರ್ ಆಗುತ್ತಿದೆ ಎಂದು ಹೇಳಿ ಸೂಟ್ ಕೇಸ್ ನಲ್ಲಿ  ತನ್ನ ಸ್ನೇಹಿತನನ್ನು ಕರೆತಂದು ಪೊಲೀಸರಿಗೆ ಸಿಕ್ಕಿಹಾಕಿಕೊಂಡಿದ್ದಾನೆ. ಹೌದು.. ಪೊಲೀಸ್ ಮೂಲಗಳ ಪ್ರಕಾರ, ಮಂಗಳೂರಿನ ಆರ್ಯಸಮಾಜ ರಸ್ತೆಯಲ್ಲಿನ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ವ್ಯಕ್ತಿಗಳನ್ನು ಹೊರತು ಪಡಿಸಿ ಉಳಿದ ಯಾವುದೇ ವ್ಯಕ್ತಿಗಳಿಗೆ ಪ್ರವೇಶವಿಲ್ಲ. ಆದರೆ ಈ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ವಿದ್ಯಾರ್ಥಿಗೆ ರೂಂನಲ್ಲಿ ಒಬ್ಬನೇ ಇರಲು  ಬೋರ್‌ ಆಗಿದ್ದು ತನ್ನ ಗೆಳೆಯನನ್ನು ಸೂಟ್‌ಕೇಸ್‌ನಲ್ಲಿ ಇರಿಸಿ ಅಪಾರ್ಟ್‌ಮೆಂಟ್‌ ಒಳಗೆ ಕರೆದುಕೊಂಡು ಬರಲು ಯತ್ನಿಸಿದ್ದಾನೆ. ತನ್ನ ಗೆಳೆಯನನ್ನು ದೊಡ್ಡ ಸೂಟ್‌ಕೇಸ್‌ನಲ್ಲಿ ಇರಿಸಿ ಅಪಾರ್ಟ್‌ಮೆಂಟ್‌ ಒಳಗೆ ಕೊಂಡೊಯ್ಯುತ್ತಿದ್ದಂತೆ ಸೂಟ್‌ಕೇಸ್‌ ಅಲುಗಾಡಿದ್ದು ಅನುಮಾನ ಬಂದು  ತಪಾಸಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಸೂಟ್‌ಕೇಸ್‌ ಒಳಗೆ ವ್ಯಕ್ತಿ ಇರುವುದು ಬೆಳಕಿಗೆ ಬಂದಿದ್ದು ಇಬ್ಬರನ್ನು ಕದ್ರಿ ಪೊಲೀಸ್‌ ಠಾಣೆಗೆ ಕರೆದೊಯ್ದು ವಿಚಾರಣೆ ಮಾಡಲಾಗುತ್ತಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا