Urdu   /   English   /   Nawayathi

“ಎಂಕ್ಲೆಗ್ ಮೀನು ಬೋಡು”.. ಉಡುಪಿಯಲ್ಲಿ ಮೀನಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ

share with us

ಉಡುಪಿ: (ಉಡುಪಿ ಟೈಮ್ಸ್ ಸ್ಪೆಷಲ್ ವರದಿ)– 08 ಏಪ್ರಿಲ್ 2020 (ಫಿಕ್ರೋಖಬರ್ ಸುದ್ದಿ) “ಎಂಕ್ಲೆಗ್ ಮೀನು ಬೋಡು” ಉಡುಪಿಯಲ್ಲಿ ಕೇಳಿ ಬರುತ್ತಿದ್ದೆ ಮೀನು ಪ್ರಿಯರ ಕೂಗು. ಒಂದು ಕಡೆ ಗಗನಕ್ಕೇರಿದ ತರಕಾರಿ ಬೆಲೆ, ಇನ್ನೊಂದೆಡೆ ಚಿಕ್ಕನ್ ತಿಂದರೆ ಕರೋನ ಬರಬಹುದೆಂಬ ಹುಸಿಭಯ. ಮೀನು ಸಿಗದೇ ಒದ್ದಾಡುತ್ತಿದ್ದಾರೆ ಉಡುಪಿ ಜನತೆ, ನಡೆಯುತ್ತಿದ್ದೆ ಮೀನಿಗಾಗಿ ಸಾಮಾಜಿಕ ಜಾಲ ತಾಣದಲ್ಲಿ ಭಾರಿ ಅಭಿಯಾನ. ಏನಿದು ಮೀನು ಸ್ಟೋರಿ ತಿಳಿಯಬೇಕಾದರೆ ಈ ವರದಿ ಓದಿ.

ವಿವಿಧ ಮೀನಿನ ಖಾದ್ಯಗಳಿಗೆ ಹೆಸರುವಾಸಿಯಾದ ಊರು ಉಡುಪಿ. ಆದರೆ ಇದೀಗ ಉಡುಪಿಯಲ್ಲಿ ಮತ್ಸ್ಯ ಕ್ಷಾಮ ಉಂಟಾಗಿದೆ. ಮಾರುಕಟ್ಟೆಯಲ್ಲಿ ಮೀನು ಸಿಗದೆ ಇರೋ ಪರಿಸ್ಥಿತಿ ಬಂದಿದೆ. ಅದಕ್ಕಾಗಿ ಮೀನು ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಜಿಲ್ಲಾಧಿಕಾರಿ ಜಗದೀಶ್ ರವರಿಗೆ ನಿರ್ಬಂಧ ಸಡಿಲಿಸಿ ಮೀನು ಸಿಗುವಂತೆ ಮಾಡಿ ಎಂಬ ಬೇಡಿಕೆ ಇಡುತ್ತಿದ್ದಾರೆ.

ಮೀನು ಕ್ಷಾಮಕ್ಕೆ ಕಾರಣವೇನು – ಕೊರೋನಾ ಮಹಾ ಮಾರಿ ಕೇವಲ ಜನಸಾಮಾನ್ಯರಿಗೆ ಮಾತ್ರವಲ್ಲದೆ ಪ್ರಾಣಿ , ಪಕ್ಷಿ ,ಜಲಚರ ಜೀವಿಗಳಿಗೂ ಅದರ ಬಿಸಿ ತಟ್ಟಿದ್ದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಕೊರೋನಾ ಎಮೆರ್ಜೆನ್ಸಿಯ ಸಂದರ್ಭದಲ್ಲಿ ಮೀನು ಹಿಡಿಯಲು ಕೇವಲ 5 ಜನ ಮೀನುಗಾರರು ಮಾತ್ರ ಸಮುದ್ರಕ್ಕೆ ತೆರಳಲು ಅವಕಾಶ ನೀಡಿದ್ದು ಇದರಿಂದ ದೊಡ್ಡ ಬೋಟ್ ಗಳು ಬಂದರಿನಲ್ಲಿ ಲಂಗರ್ ಹಾಕಿದೆ. ಕೇವಲ ನಾಡ ದೋಣಿಗಳಲ್ಲಿ ಸಿಕ್ಕಿದಷ್ಟು ಮೀನನ್ನು ದಡಕ್ಕೆ ತರಬೇಕಾದ ಪರಿಸ್ಥಿತಿ. ಆದರೆ ಇದು ಉಡುಪಿ ಜಿಲ್ಲೆಗೆ ಸಾಕಾಗುತ್ತಿಲ್ಲ, ಬಂದರಿನಲ್ಲಿ ಜನ ಜಂಗುಳಿಯನ್ನ ತಡೆಯಲು ಜಿಲ್ಲಾಧಿಕಾರಿಯವರು ಮೀನು ಮಾರಾಟವನ್ನು ನಿಷೇದಿಸಿದ್ದಾರೆ , ತರಕಾರಿ ಬೆಲೆಯೂ ಗಗನಕ್ಕೇರಿದ ಈ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಮೀನು ಸಿಗದೆ ಇರುವಂತ್ತದ್ದು ಮಾತ್ರ ಜನರನ್ನು ಕಂಗೆಡಿಸಿದೆ .


ಜಿಲ್ಲಾಧಿಕಾರಿಯವರೇ ಇತ್ತ ಕೇಳಿ…… ಕೊರೋನಾ ಎಮರ್ಜೆನ್ಸಿ ಇಂದ ಉಂಟಾದ ಮತ್ಸ್ಯ ಕ್ಷಾಮಕ್ಕೆ ಜನರು ಸಾಮಾಜಿಕ ಜಾಲತಾಣದಲ್ಲಿ ಬಾರಿ ಅಭಿಯಾನ ಪ್ರಾರಂಭಿಸಿದ್ದು, ಆಳ ಸಮುದ್ರಕ್ಕೆ ತೆರಳುವ ಮೀನುಗಾರರಿಗೆ ಕೆಲವೊಂದು ಸುರಕ್ಷತೆಯನ್ನು ಕಟ್ಟುನಿಟ್ಟಿನಲ್ಲಿ ಪಾಲಿಸುವಂತೆ ಮಾಡಬೇಕು. ಹೆಚ್ಚು ಜನರನ್ನು ಒಳಗೊಂಡ ಬೋಟ್ ಗಳು ಫಿಶಿಂಗ್ ಮಾಡುವಂತೆ ಕ್ರಮ ತೆಗೆದುಕೊಳ್ಳಿ. ದಿನಸಿ ಸಾಮಗ್ರಿ ಖರೀದಿಗೆ ನೀಡಿದ ಸಾಮಾಜಿಕ ಅಂತರದ ಮಾರಾಟದಂತೆ ಮೀನು ಖರೀದಿಗೆ ನಿರ್ದೇಶನ ನೀಡಿ. ಆಹಾರ ವಸ್ತುಗಳ ದರ ಏರಿಕೆಗೂ ಕಡಿವಾಣ ಹಾಕಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿಯವರಿಗೆ ಬೇಡಿಕೆಯ ಜೊತೆಗೆ ಸಲಹೆಗಳನ್ನು ನೀಡಿದ್ದಾರೆ. ಈ ಅಭಿಯಾನಕ್ಕೆ ಜಿಲ್ಲಾಧಿಕಾರಿಯವರು ತಥಾಸ್ತು ಹೇಳುತ್ತಾರೋ ಕಾದುನೋಡಬೇಕಾಗಿದೆ….

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا