Urdu   /   English   /   Nawayathi

ಭಟ್ಕಳದಲ್ಲಿ ನಡೆಯುತ್ತಿರುವ ಲಾಕ್ ಡೌನ್ ಮಧ್ಯೆ ಜನರಿಗೆ ನೀಡಲಾದ ಕೆಲವು ಸೌಲಭ್ಯ

share with us

ಭಟ್ಕಳ: 01 ಏಪ್ರಿಲ್ 2020 (ಫಿಕ್ರೋಖಬರ್ ಸುದ್ದಿ) ಭಟ್ಕಳದ ಕೆಲವು ಪ್ರದೇಶಗಳಲ್ಲಿ ಲಾಕ್ ಡೌನ್ ಬಳಿಕ ಮನೆ ಮನೆಗಳಿಗೆ ಕಿರಾಣಿ ಹಾಗೂ ಅಗತ್ಯವಾದ ವಸ್ತುಗಳನ್ನು ತಲುಪಿಸಲಾಗುತ್ತಿತ್ತು. ಇದರ ನಂತರ ಹೆಬ್ಳೆ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿರುವ ಜಾಮಿಯಾ ಬಾದಿನಲ್ಲಿ ವಾರದ ಬುಧವಾರ ಮತ್ತು ಶನಿವಾರದಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರ ವರೆಗೆ ಜನರಿಗೆ ಅಗತ್ಯವಾದ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಲಾಗಿದೆ. ಇದರ ಮಧ್ಯೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಒಟ್ಟು ಗೂಡಿ ತಮ್ಮ ಸರದಿಗಾಗಿ ದಾರಿ ನೋಡುತ್ತಿರುವುದು ಕಂಡು ಬಂದಿದೆ. ಅಂಗಡಿದಾರರಿಗೆ ತಮ್ಮ ತಮ್ಮ ಅಂಗಡಿಗಳ ಮುಂದೆ ಜನರಿಗೆ ನಿಲ್ಲುವ ಸಲುವಾಗಿ ಕೆಲವು ವೃತ್ತಗಳÀನ್ನು ಹಾಕುವ ಆದೇಶ ನೀಡಲಾಗಿತ್ತು ಮತ್ತು ಜನರು ಈ ವೃತ್ತಗಳಲ್ಲಿಯೇ ನಿಂತು ಇಬ್ಬರ ಮಧ್ಯೆ ಅಂತರವನ್ನು ಬಿಟ್ಟು ತಮ್ಮ ವಸ್ತುಗಳನ್ನು ಖರೀದಿಸಲು ಆದೇಶ ನೀಡಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡುವ ಉದ್ದೇಶದಿಂದ ಪೋಲೀಸರು ಈ ಸ್ಥಳಗಳಲ್ಲಿ ತಮ್ಮ ಕರ್ತವ್ಯದಲ್ಲಿ ತೊಡಗಿದ್ದು, ಎಲ್ಲಿಯೂ ಸಹ ಅವ್ಯವಸ್ಥೆ ಎದುರಾಗದ ಹಾಗೆ ಕಟ್ಟು ನಿಟ್ಟಿನ ಕಾರ್ಯ ನಿರ್ವಹಿಸುತ್ತಿದ್ದಾರೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا