Urdu   /   English   /   Nawayathi

ಕೊರೊನಾಗೆ ದೇಶದಲ್ಲಿ ಮತ್ತೊಂದು ಬಲಿ... ಸಾವಿನ ಸಂಖ್ಯೆ 8ಕ್ಕೆ ಏರಿಕೆ

share with us

ಕೋಲ್ಕತ್ತಾ: 23 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ಮಹಾಮಾರಿ ಕೊರೊನಾಗೆ ದೇಶದಲ್ಲಿ ಇದೀಗ ಮತ್ತೊಂದು ಬಲಿಯಾಗಿದ್ದು, 57 ವರ್ಷದ ವ್ಯಕ್ತಿಯೋರ್ವ ಪಶ್ಚಿಮ ಬಂಗಾಳದಲ್ಲಿ ಸಾವನ್ನಪ್ಪಿದ್ದಾನೆ. ಕೊರೊನಾ ವೈರಸ್​ನಿಂದ ಬಳಲುತ್ತಿದ್ದ ವ್ಯಕ್ತಿಯನ್ನ ಪಶ್ಚಿಮ ಬಂಗಾಳದ ಎಎಂಆರ್​ಐ ಆಸ್ಪತ್ರೆಯಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆತನಿಗೆ ಕೊರೊನಾ ಪಾಸಿಟಿವ್​ ಇರುವುದು ಕನ್ಫರ್ಮ್​ ಆದ ಬೆನ್ನಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಇತ್ತೀಚೆಗೆ ಇಟಲಿಯಿಂದ ಬಂದಿದ್ದ 55 ವರ್ಷದ ವ್ಯಕ್ತಿಯೋರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಕೋವಿಡ್-19 ಸೋಂಕಿನ ಕಾರಣದಿಂದ ಪಶ್ಚಿಮ ಬಂಗಾಳದಲ್ಲಿ ಆದ ಮೊದಲ ಸಾವು ಇದಾಗಿದ್ದು, ದೇಶದಲ್ಲಿ 8ನೇ ಪ್ರಕರಣವಾಗಿದೆ. ಈ ಮೂಲಕ ವಿಶ್ವದಾದ್ಯಂತ ಸಾವಿನ ಸಂಖ್ಯೆ 15,189 ಆಗಿದ್ದು, ಇಟಲಿಯಲ್ಲೇ 5,476 ಜನರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಇದೀಗ 415 ಕೊರೊನಾ ಕೇಸ್​ಗಳು ಕಂಡು ಬಂದಿದ್ದು, 23 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಉಳಿದಂತೆ 8 ಜನರು ಸಾವನ್ನಪ್ಪಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا