Urdu   /   English   /   Nawayathi

ಬಂಟ್ವಾಳ ಪುರಸಭೆಯಿಂದ ಸ್ಥಳೀಯರ ಮೇಲೆ ದೌರ್ಜನ್ಯ : ಅಬೂಬಕ್ಕರ್ ಸಜೀಪ ಆರೋಪ

share with us

ಮಂಗಳೂರು: 22 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದ ಕಂಚಿನಡ್ಕ ಪದವು ಎಂಬ ಜನವಸತಿ ಪ್ರದೇಶದಲ್ಲಿ ಜನರ ವಿರೋಧದ ನಡುವೆಯೂ ಘನತ್ಯಾಜ್ಯ ಘಟಕವನ್ನು ನಿರ್ಮಾಣ ಮಾಡಲಾಗಿದೆ‌. ಕರ್ನಾಟಕ ಉಚ್ಚನ್ಯಾಯಾಲಯ ಕೆಲವೊಂದು ನಿಬಂಧನೆಗಳನ್ನು ಅನುಸರಿಸಿ ತ್ಯಾಜ್ಯ ವಿಲೇವಾರಿ ಮಾಡಲು ತಿಳಿಸಿತ್ತು. ಆದರೆ ಬಂಟ್ವಾಳ ಪುರಸಭೆ ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಕೇವಲ ತ್ಯಾಜ್ಯವನ್ನು ಡಂಪ್ ಮಾಡಿ ಹೋಗಿ ಸ್ಥಳೀಯ ನಿವಾಸಿಗಳ ಮೇಲೆ ದೌರ್ಜನ್ಯ ಎಸಗುತ್ತಿದೆ ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ನಿಕಟಪೂರ್ವ ಉಪಾಧ್ಯಕ್ಷ ಎಸ್.ಅಬೂಬಕ್ಕರ್ ಸಮೀಪ ಹೇಳಿದರು. ನಗರದ ಪ್ರೆಸ್ ಕ್ಲಬ್​ನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಪ್ರದೇಶದಲ್ಲಿ ಕಿರಿಯ ಪ್ರಾಥಮಿಕ ಶಾಲೆ, ಅಂಬೇಡ್ಕರ್ ಭವನ, ಹಿಂದೂ ರುದ್ರಭೂಮಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಸ್ಥಾವರ, ದೇವಸ್ಥಾನ, ಮಸೀದಿ, ಮದರಸ ಹಾಗೂ ಕೈಗಾರಿಕಾ ಸ್ಥಾವರಗಳು ಕಾರ್ಯಾಚರಿಸುತ್ತಿವೆ. ಆದರೆ ಇದೀಗ ಬಂಟ್ವಾಳ ಪುರಸಭೆಯು ಸ್ಥಳೀಯರ ವಿರೋಧದ ನಡುವೆಯೂ ಮಾಲಿನ್ಯ ನಿಯಂತ್ರಣ ಮಂಡಳಿಯ ಯಾವುದೇ ಪರವಾನಿಗೆ ಇಲ್ಲದೆ, ಯಾವುದೇ ನಿಬಂಧನೆಗಳನ್ನು ಪೂರೈಸದೆ ಅವೈಜ್ಞಾನಿಕವಾಗಿ ಘನತ್ಯಾಜ್ಯವನ್ನು ಹಾಕುವುದು ಖಂಡನೀಯ ಎಂದರು. ಎಲ್ಲೆಡೆಯೂ ಕೊರೊನಾ ಸೋಂಕು ಹರಡುತ್ತಿದ್ದು, ಜನವಸತಿ ಪ್ರದೇಶದಲ್ಲಿ ಈ ರೀತಿಯಲ್ಲಿ ಘನತ್ಯಾಜ್ಯ ಹಾಕಿದರೆ ಮತ್ತಷ್ಟು ಅನಾಹುತ ಸಂಭವಿಸುವುದಕ್ಕೆ ಆಹ್ವಾನ ನೀಡಿದಂತಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆ ಇತ್ತ ಕಡೆಗೆ ಗಮನಹರಿಸಿ ಕೂಡಲೇ ಕ್ರಮ ಕೈಗೊಂಡು ವಿಲೇವಾರಿ ಘಟಕವನ್ನು ಸ್ಥಳಾಂತರ ಮಾಡದಿದ್ದಲ್ಲಿ ಸ್ಥಳೀಯರೆಲ್ಲರೂ ಸೇರಿ ಉಗ್ರ ಹೋರಾಟ ಮಾಡಲಿದ್ದೇವೆ ಎಂದು ಎಚ್ಚರಿಸಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا