Urdu   /   English   /   Nawayathi

ಇಟಲಿಯಿಂದ ವಾಪಸಾದ 263 ಭಾರತೀಯರು ಡೈರೆಕ್ಟ್​ ಐಟಿಬಿಪಿ ಕ್ವಾರಂಟೈನ್​ಗೆ..

share with us

ನವದೆಹಲಿ: 22 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ಕೋವಿಡ್​-19 ಹಿನ್ನೆಲೆಯಲ್ಲಿ ಏಕಾಏಕಿ ಇಟಲಿಯಿಂದ ಸ್ಥಳಾಂತರಿಸಲಾಗಿರುವ 263 ಭಾರತೀಯರನ್ನು ಭಾನುವಾರ ದೇಶಕ್ಕೆ ಕರೆಸಿಕೊಂಡು ಸುರಕ್ಷತಾ ದೃಷ್ಟಿಯಿಂದ ಅವರನ್ನೆಲ್ಲಾ ಐಟಿಬಿಪಿ ಕ್ವಾರಂಟೈನ್​ಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ರೋಮ್​ನಿಂದ ಹೊರಟ ವಿಶೇಷ ವಿಮಾನವು ಇಟಲಿಯಿಂದ ಭಾರತಕ್ಕೆ ಹಿಂದಿರುಗಿದ 263 ಪ್ರಯಾಣಿಕರನ್ನು ದೆಹಲಿಯ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 10 ಗಂಟೆಗೆ ತಂದಿಳಿಸಿತು. ನಮ್ಮ ಜನರನ್ನು ಕರೆತರಲು ಏರ್ ಇಂಡಿಯಾ ವಿಮಾನ ಶನಿವಾರ ದೆಹಲಿಯಿಂದ ಹೊರಟಿತ್ತು" ಎಂದು ಏರ್ ಇಂಡಿಯಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಟರ್​ಮ್ಯಾಕ್‌ನಲ್ಲಿ ಎಲ್ಲಾ 263 ಜನರ ಥರ್ಮಲ್ ಸ್ಕ್ರೀನಿಂಗ್ ನಡೆಸಿದ ನಂತರ ನೈರುತ್ಯ ದೆಹಲಿಯ ಚಾವ್ಲಾ ಪ್ರದೇಶದಲ್ಲಿರುವ ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ಯಲಾಗುತ್ತಿದೆ" ಎಂದು ಐಟಿಬಿಪಿ ವಕ್ತಾರರು ತಿಳಿಸಿದ್ದಾರೆ. ಮಾರ್ಚ್ 15ರಿಂದ ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್ ಕ್ಯಾರೆಂಟೈನ್‌ನಲ್ಲಿ 215 ಭಾರತೀಯರನ್ನಿರಿಸಲಾಗಿದೆ. ಇವರನ್ನೂ ಕೂಡ ರೋಮ್‌ನಿಂದ ವಿಶೇಷ ಏರ್ ಇಂಡಿಯಾ ವಿಮಾನದಿಂದ ಕರೆತರಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا