Urdu   /   English   /   Nawayathi

ನಿರ್ಲಜ್ಜ, ಲೈಂಗಿಕ ವಿಕೃತಿ, ನಾಚಿಕೆಗೇಡು ನ್ಯಾಯಾಧೀಶ: ಗೊಗೋಯ್ ವಿರುದ್ಧ ನ್ಯಾ.ಮಾರ್ಕಂಡೇಯ ಕಟ್ಜು ವಾಗ್ದಾಳಿ

share with us

ನವದೆಹಲಿ: 18 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ಇತ್ತೀಚೆಗಷ್ಟೇ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಕೇಂದ್ರ ಸರ್ಕಾರದಿಂದ ನಾಮನರ್ದೇಶನಗೊಂಡಿರುವ ಮಾಜಿ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯಿ ವಿರುದ್ಧ ಸುಪ್ರೀಂಕೋರ್ಟ್ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಖಟ್ಜು ಅವರು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ನಾನು 20 ವರ್ಷಗಳ ಕಾಲ ವಕೀಲನಾಗಿದ್ದೆ. ಬಳಿಕ 20 ವರ್ಷ ನ್ಯಾಯಾಧೀಶನಾಗಿದ್ದೆ. ಈ ಅವಧಿಯಲ್ಲಿ ನಾನು ಬಹಳಷ್ಟು ಉತ್ತಮ ನ್ಯಾಯಾಧೀಶರನ್ನು ನೋಡಿದ್ದಾನೆ. ಹಾಗೆಯೇ ಕೆಟ್ಟ ನ್ಯಾಯಾಧೀಶರನ್ನೂ ನೋಡಿದ್ದೇನೆ. ಆದರೆ, ಈ ಲೈಂಗಿಕ ವಿಕೃತಿ ರಂಜನ್ ಗೊಗೋಯಿಯಂತಹ ನಿರ್ಲಜ್ಜ, ನಾಚಿಕೆಗೇಡು ನ್ಯಾಯಾಧೀಶನ್ನು ನಾನು ಭಾರತದ ನ್ಯಾಯಾಂಗದಲ್ಲಿ ನೋಡಲೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. 

Markandey Katju@mkatju

I have been a lawyer for 20 yrs and a judge for another 20. I hv known many good judges & many bad judges. But I have never known any judge in the Indian judiciary as shameless & disgraceful as this sexual pervert Ranjan Gogoi. There was hardly any vice which was not in this man

26.6K

9:32 PM - Mar 17, 2020

Twitter Ads info and privacy

9,243 people are talking about this

ಈ ವ್ಯಕ್ತಿಯಲ್ಲಿ ಇಲ್ಲದ ದುಷ್ಟತನಗಳೇ ಇಲ್ಲ. ಈ ಅಯೋಗ್ಯ ಹಾಗೂ ದುಷ್ಟ ಇನ್ನೂ ಭಾರತದ ಸಂಸತ್ತಿನಲ್ಲಿ ಇರಲಿದ್ದಾನೆ. ಹರಿ ಓಂ ಎಂದು ಬರೆದುಕೊಂಡಿದ್ದಾರೆ. ರಂಜನ್ ಗೊಗೋಯಿ ವಿರುದ್ಧ ಕಟ್ಜು ಅವರು ಇದು ಮೊದಲನೇ ಬಾರಿ ವಾಗ್ದಾಳಿ ನಡೆಸುತ್ತಿಲ್ಲ. ಈ ಹಿಂದೆ ಕೂಡ ಗೊಗೋಯಿ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದರು. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا