Urdu   /   English   /   Nawayathi

ಕೊರೋನಾವೈರಸ್ : ಮೋದಿ, ಸೌದಿ ದೊರೆ ಚರ್ಚೆ

share with us

ನವದೆಹಲಿ: 18 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ಕೊರೋನಾವೈರಸ್ ಹರಡುವಿಕೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರಮೋದಿ ಹಾಗೂ ಸೌದಿ ಅರೇಬಿಯಾ ದೊರೆ ಮೊಹಮದ್‍ ಬಿನ್‍ ಸಲ್ಮಾನ್ ಮಂಗಳವಾರ ಚರ್ಚಿಸಿದ್ದಾರೆ. ಈ ಜಾಗತಿಕ ಸವಾಲನ್ನು ಸಮರ್ಪಕವಾಗಿ ನಿಭಾಯಿಸಲು ಸಂಘಟಿತ ಪ್ರಯತ್ನಗಳ ಅಗತ್ಯವನ್ನು ಪ್ರತಿಪಾದಿಸಿರುವ ಮೋದಿ ಅವರು, ಇದು ಕೋಟ್ಯಂತರ ಜನರ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಪರಿಣಾಮ ಬೀರಿದೆ. ಅಲ್ಲದೆ, ವಿಶ್ವದ ಅನೇಕ ಭಾಗಗಳಲ್ಲಿ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಅಪಾಯವಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಪ್ರಸಕ್ತ ಸನ್ನಿವೇಶದಲ್ಲಿ  ಸಾರ್ಕ್ ದೇಶಗಳನ್ನು ಉದ್ದೇಶಿಸಿ ಭಾರತದ ಇತ್ತೀಚಿನ ಉಪಕ್ರಮವನ್ನು ಪ್ರಸ್ತಾಪಿಸಿರುವ ಪ್ರಧಾನಿ ಮೋದಿ, ಜಿ 20 ನಾಯಕತ್ವ ವಹಿಸಿಕೊಂಡ ಯಾವುದೇ ದೇಶ  ಜಾಗತಿಕವಾಗಿ ಎಲ್ಲರ ಅಭ್ಯದಯಕ್ಕೆ ಶ್ರಮಿಸಬೇಕು ಎಂದು ಕರೆ ನೀಡಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا