Urdu   /   English   /   Nawayathi

ಬಾಂಧವರಿಗೆ ಮೌಲಾನಾ ಸಘೀರ್ ಅಹ್ಮದ್ ರಶಾದಿ ಅವರಿಂದ ಕೆಲವು ಅಗತ್ಯ ಸೂಚನೆಗಳು

share with us

ಬೆಂಗಳೂರು: 18 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ಕರ್ನಾಟಕ ರಾಜ್ಯದ ಅಮೀರ್ ಎ ಷರಿಯಾ ಆದ ಮೌಲಾನಾ ಸಘೀರ್  ಅಹ್ಮದ್ ರಶಾದಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಒಂದು ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ವೈದ್ಯರು, ಹಿರಿಯರು ಮತ್ತು ಕೆಲವು ವಿದ್ವಾಂಸರು ಪಾಲ್ಗೊಂಡಿದ್ದರು. ಹರಡುತ್ತಿರುವ ಕೊರೋನಾ ವೈರಸ್ ಅನ್ನು ತಡೆಗಟ್ಟಲು ಕೆಲವು ಅಗತ್ಯವಾದ ಸೂಚನೆಗಳನ್ನು ಮಾಲಾನಾ ಅವರು ತಿಳಿಸಿದರು. ಮೊದಲನೆಯದಾಗಿ ಮುಂದಿನ ಮೂರು ಶುಕ್ರವಾರಗಳಲ್ಲಿ ಧರ್ಮೋಪದೇಶದ ಜೊತೆಗೆ ನಮಾಝ್ ಕೂಡ ಹದಿನೈದು ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು. ಮಸೀದಿಯ ಕಾರ್ಪೆಟ್, ಶೌಚಾಲಯ, ಮತ್ತು ಅಕ್ಕ ಪಕ್ಕದಲ್ಲಿರುವ ಚರಂಡಿಗಳನ್ನು ಖಡ್ಡಾಯವಾಗಿ ಪ್ರತಿದಿನ ಸ್ವಚ್ಛಗೊಳಿಸಬೇಕು. ಮಸೀದಿಗಳಲ್ಲಿ ಇರಿಸಲಾದ ಕರವಸ್ತ್ರ, ಟೋಪಿ, ಟಾವೆಲ್ಗಳನ್ನು ತೊರೆಯಬೇಕು. ಮಸೀದಿಗೆ ಬರುವವರು ತಮ್ಮ ತಮ್ಮ ಮನೆಗಳಿಂದಲೇ ವುಝೂ ಮಾಡಿ ಬರಬೇಕು. ಹಾಗೂ ಎಲ್ಲಾ ಭಾಂಧವರು ಏಕಾಗ್ರತೆ ಮತ್ತು ಶ್ರದ್ಧೆಯಿಂದ ಕೇವಲ ಅಲ್ಲಾಹನಲ್ಲಿ ಬೇಡುತ್ತಿರಬೇಕು. ಯೊರೊಬ್ಬರೂ ಈ ವೈರಸ್ನಿಂದ ಭಯಬೀತರಾಗಬೇಕಾಗಿಲ್ಲ ಎಂದು ನುಡಿದರು.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا