Urdu   /   English   /   Nawayathi

ಹೆಚ್ಚಿನ ಬೆಲೆಗೆ ಮಾಸ್ಕ್ ಮಾರುತ್ತಿದ್ದ ಔಷಧಿ ಅಂಗಡಿಗಳ ಮೇಲೆ ದಾಳಿ, ₹20 ಸಾವಿರ ದಂಡ..

share with us

ಮೈಸೂರು: 15 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ನಿಗಿದಿಗಿಂತ ಹೆಚ್ಚಿನ ಬೆಲೆಗೆ ಮಾಸ್ಕ್​ ಹಾಗೂ ಸ್ಯಾನಿಟೈಸರ್​ಗಳನ್ನು ಮಾರಾಟ ಮಾಡುತ್ತಿದ್ದ ಔಷಧಿ ಅಂಗಡಿಗಳ ಮೇಲೆ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 20 ಸಾವಿರ ದಂಡ ವಿಧಿಸಿದ್ದಾರೆ.

Attack on drug stores due to Mask Price Raise and Sell

ಔಷಧಿ ಅಂಗಡಿಗಳ ಮೇಲೆ ದಾಳಿ..

ನಗರದ 20 ಔಷಧಿ ಅಂಗಡಿಗಳ ಮೇಲೆ ದಾಳಿ ನಡೆಸಿದ್ದು, 4 ಅಂಗಡಿ ಮಾಲೀಕರು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದು ತಿಳಿದು ಬಂದಿದೆ. ಚೀನಿ ವೈರಸ್​ ದಾಳಿಗೆ ಕಂಗಾಲಾಗಿರುವ ಸಾರ್ವಜನಿಕರು ರಕ್ಷಣೆಗಾಗಿ ಮಾಸ್ಕ್​ ಹಾಗೂ ಸ್ಯಾನಿಟೈಸರ್​ ಮೊರೆ ಹೋಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಔಷಧಿ ಅಂಗಡಿಗಳು ಹೆಚ್ಚಿನ ಲಾಭದ ದುರಾಸೆಗೆ ಬೆಲೆ ಏರಿಸಿದ್ದವು. ಕಾನೂನು ಮಾಪನಶಾಸ್ತ್ರ(ಪೊಟ್ಟಣ ಸಾಮಾಗ್ರಿಗಳು)ನಿಯಮಗಳ ಅಡಿಯಲ್ಲಿ ನಾಲ್ಕು(4) ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ತಲಾ 5 ಸಾವಿರದಂತೆ 4 ಅಂಗಡಿಗಳಿಂದ 20 ಸಾವಿರ ದಂಡ ವಸೂಲು ಮಾಡಲಾಗಿದೆ. ಕಾನೂನು ಮಾಪನಶಾಸ್ತ್ರ ಸಹಾಯಕ ನಿಯಂತ್ರಕ ಕೆ ಎಂ ಮಹದೇವಸ್ವಾಮಿ ಮತ್ತು ನಿರೀಕ್ಷಕರಾದ ಬಿ ಎಸ್ ಸುಮಾರಾಣಿ, ಸಹಾಯಕ ಔಷಧ ನಿಯಂತ್ರಕ ನಾಗರಾಜ ಎಸ್, ನಾಜಿಯಾ ಮತ್ತು ಸಿಬ್ಬಂದಿ ದಾಳಿ ವೇಳೆ ಹಾಜರಿದ್ದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا