Urdu   /   English   /   Nawayathi

ಕೊರೋನಾ ವೈರಸ್ ಹರಡುತ್ತಿರುವ ಕಾರಣ ಜಾಮಿಯಾ ಮದರಸಾಗೆ ರಜೆ ಘೋಷಣೆ

share with us

ಭಟ್ಕಳ: 14 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ರಾಜ್ಯದಲ್ಲಿ ಹರಡುತ್ತಿರುವ ಕೊರೋನಾ ವೈರಸ್ ಕಾರಣ ಮತ್ತು ರಾಜ್ಯ ಸರ್ಕಾರದ ರಜೆ ಘೋಷಣೆಯನ್ನು ಗಮನದಲ್ಲಿಟ್ಟುಕೊಂಡು ಜಾಮಿಯಾ ಇಸ್ಲಾಮಿಯಾ ಅರೇಬಿಕ್ ಶಾಲೆ ಹಾಗೂ ಮದರಸ ಅರಬೀಯ ತಾಲಿಮುಲ್ ಕುರ್‍ಆನ್ ತೆಂಗಿನ ಗುಂಡಿಯಲ್ಲಿರುವ ಮದರಸಾಗಳಲ್ಲಿ 15 ಮಾರ್ಚ್ 2020ರಿಂದ 22 ಮಾರ್ಚ್ 2020ರವರೆಗೆ ರಜೆ ಘೋಷಿಸಲಾಗಿದೆ. 23 ಮಾರ್ಚ್ ಸೋಮವಾರದಂದು ಎಂದಿನಂತೆ ಮದರಸಾಗಳು ತೆರೆಯಲಿವೆ ಎಂದು ಜಾಮಿಯಾ ಇಸ್ಲಾಮಿಯಾ ಜಾಮಿಯಾ ಆಬಾದ್ ಅರೇಬಿಕ್ ಶಾಲೆಯ ಪ್ರಾಂಶುಪಾಲರಾದ ಮೌಲಾನಾ ಮಕ್ಬೂಲ್ ಅಹ್ಮದ್ ಕೊಬಟ್ಟೆ ನದ್ವಿ ಅವರು ತಿಳಿಸಿದ್ದಾರೆ. ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪರೀಕ್ಷೆ ರದ್ದುಗೊಳಿಸಲಾಗಿದ್ದು, ಅವರಿಗೆ ಮುಂದಿನ ತರಗತಿಗಳಿಗೆ ಪ್ರವೇಶಕೊಡಲಾಗುವುದು. ಹಾಗೂ ಜಾಮಿಯಾ ಇಸ್ಲಾಮಿಯಾ ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ಮಾರ್ಚ್ 28ರಿಂದ ಪರೀಕ್ಷೆಗಳು ಪ್ರಾರಂಭವಾಗಿ ಏಪ್ರಿಲ್ 7ರವರೆಗೆ ನಡೆಯಲಿವೆ ಎಂದು ತಿಳಿಸಲಾಗಿದೆ. ರಜಾದಿನಗಳಲ್ಲಿ ಶಿಕ್ಷಕರು ಎಂದಿನಂತೆ ಮದರಸಾಗೆ ಹಾಜರಾಗಲು ತಿಳಿಸಲಾಗಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا