Urdu   /   English   /   Nawayathi

ಸ್ಫೋಟಕದ ಆರೋಪಿ ಆದಿತ್ಯ ರಾವ್‌ಗೆ ಮಂಪರು ಪರೀಕ್ಷೆ

share with us

ಮಂಗಳೂರು: 14 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ಇಲ್ಲಿನ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜನವರಿ 20 ರಂದು ಸ್ಫೋಟಕ ಇರಿಸಿದ್ದ ಆರೋಪಿ ಆದಿತ್ಯ ರಾವ್‌, ಸರಿಯಾದ ಮಾಹಿತಿ ನೀಡಿದೇ ಇರುವುದರಿಂದ ಆತನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ತನಿಖಾ ತಂಡ ಮುಂದಾಗಿದೆ. ಸದ್ಯಕ್ಕೆ ನ್ಯಾಯಾಂಗ ಬಂಧನದಲ್ಲಿ ಇರುವ ಆದಿತ್ಯ ರಾವ್‌ನಿಗೆ ಮಂಪರು ಪರೀಕ್ಷೆ ಅಗತ್ಯವಾಗಿದ್ದು, ಅನುಮತಿ ನೀಡುವಂತೆ ಎಸಿಪಿ ಬೆಳ್ಳಿಯಪ್ಪ ನೇತೃತ್ವದ ಪೊಲೀಸ್‌ ತಂಡ, ನ್ಯಾಯಾಲಯಕ್ಕೆ ಮನವಿ ಮಾಡಿದೆ. ಕಳೆದ ಮಂಗಳವಾರ ಆದಿತ್ಯ ರಾವ್‌ನಿಗೆ ತಹಶೀಲ್ದಾರ್ ಎದುರು ಗುರುತು ಪತ್ತೆ ಪರೇಡ್ ನಡೆಸಲಾಗಿತ್ತು. ಆದಿತ್ಯ ರಾವ್‌ನನ್ನು ನೋಡಿದ್ದ 15 ಮಂದಿ ಪ್ರತ್ಯಕ್ಷ ಸಾಕ್ಷಿಗಳನ್ನು ಕರೆಸಿ ಗುರುತು ಪತ್ತೆ ಪರೇಡ್ ಮಾಡಲಾಗಿತ್ತು. ಆರಂಭದಲ್ಲಿ 10 ದಿನ ವಶಕ್ಕೆ ಪಡೆದಿದ್ದ ಪೊಲೀಸರು, ಆತನ ವಿಚಾರಣೆ ನಡೆಸಿದ್ದರು. ಬಳಿಕ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆರೋಪಿ ಆದಿತ್ಯ ರಾವ್‌ನ ತನಿಖೆಯ ಸಂದರ್ಭದಲ್ಲಿ ಸರಿಯಾದ ಮಾಹಿತಿಯನ್ನು ನೀಡುತ್ತಿಲ್ಲ ಎನ್ನಲಾಗಿದ್ದು, ಹೆಚ್ಚಿನ ತನಿಖೆಗೆ ಆತನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಅನುಮತಿ ನೀಡುವಂತೆ ತನಿಖಾ ತಂಡ ನ್ಯಾಯಾಲಯಕ್ಕೆ ಮನವಿ ಮಾಡಿದೆ. ನ್ಯಾಯಾಲಯದ ಒಪ್ಪಿಗೆ ಸಿಕ್ಕಲ್ಲಿ, ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಆದಿತ್ಯ ರಾವ್‌ನನ್ನು ಮಂಪರು ಪರೀಕ್ಷೆ ಒಳಪಡಿಸಲಾಗುವುದು ಎಂದು ಉನ್ನತ ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا