Urdu   /   English   /   Nawayathi

ಸಿಂಧಿಯಾ ನಡೆಯಿಂದ ಪಾಠ ಕಲಿತ ಕಾಂಗ್ರೆಸ್? ಯುವ ನಾಯಕರಿಗೆ ಜವಾಬ್ದಾರಿಯುತ ಸ್ಥಾನ ನೀಡುತ್ತೇವೆ ಎಂದ ಕೈ ಪಕ್ಷ

share with us

ನವದೆಹಲಿ: 14 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರ್ಪಡೆಗೊಂಡ ನಂತರ ಕಾಂಗ್ರೆಸ್ ಪಾಠ ಕಲಿತಂತಿದೆ, ಪಕ್ಷದಲ್ಲಿ ಯಾವುದೇ "ಬ್ರೈನ್ ಲೈನ್" ನಡೆಯುತ್ತಿಲ್ಲ ಹಾಗೂ ಯುವ ನಾಯಕರಿಗೆ ಜವಾಬ್ದಾರಿಯುತ ಹುದ್ದೆ ನೀಡಲಾಗುವುದು ಎಂದು ಕೈ ಪಕ್ಷ ಶುಕ್ರವಾರ ಪ್ರಕಟಿಸಿದೆ. ಸಿಂಧಿಯಾ ನಂತರ ಇನ್ನಷ್ಟು ಯುವ ನಾಯಕರು ಪಕ್ಷ ತೊರೆಯಬಹುದು ಎನ್ನುವ ಮಾತನ್ನು ತಳ್ಳಿ ಹಾಕಿರುವ ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸುರ್ಜೇವಲಾ ಒಬ್ಬರು ಪಡೆಯಬಹುದಾದ ಒಂದು ಹುದ್ದೆಯ ಆಮಿಷದ ಹಿನ್ನೆಲೆ ಒಂದು ಸಿದ್ದಂತವನ್ನು ತೊರೆಯುವವರಿಗೆ ಆ ಸಿದ್ದಾಂತತದ ಮೇಲಿನ ನಂಬಿಕೆ ಹೊರಟುಹೋಗುವ ಸಮಯವೂ ಬರಲಿದೆ ಎಂದಿದ್ದಾರೆ. "ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬ್ರೈನ್ ಲೈನ್ ನಡೆಯುತ್ತಿದೆ ಎಂದು ಣಾನು ಭಾವಿಸಲಾರೆ. ಏಕೆಂದರೆ ರಾಹುಲ್ ಗಾಂಧಿ ಅವರೇ ನಿನ್ನೆ ಜ್ಯೋತಿರಾಡಿತ್ಯ ಸಿಂಧಿಯಾ ಅವರಿಗೆ ಉತ್ತರಿಸಿದ್ದಾರೆ" ಸುರ್ಜೆವಾಲಾ ಹೇಳಿದರು. "ಒಬ್ಬ ವ್ಯಕ್ತಿಯು ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದು ನಮಗೆಲ್ಲಾ ತೀವ್ರ ಆಘಾತವಾಗಿದೆ. ಆದಾಗ್ಯೂ, ಜ್ಯೋತಿರಾಡಿತ್ಯ ಜಿ ಅಥವಾ ಇನ್ನಾವುದೇ ವ್ಯಕ್ತಿಯು ಅವರ ಸಿದ್ದ್ಂಆತವು ಒಂದು ಹುದ್ದೆಯ ಮೇಲೆ ತಾತ್ಕಾಲಿಕ ಆಮಿಷ ಕ್ಕೆ ಒಳಪಟ್ಟಿದ್ದರೆ ಸಿದ್ದಾಂತವೆನ್ನುವುದು ಅಧಿಕಾರ ಸ್ಥಾನಕ್ಕಿಂತ  ಮುಖ್ಯವಾದುದಾಗಿದೆ ಎಂದು ಯೋಚಿಸಬೇಕಾಗಿದೆ" ಎಂದು ಅವರು ಹೇಳಿದರು 

ಜನರು ಸಿದ್ಧಾಂತ ಮತ್ತು  ಹುದ್ದೆಯ ಆಮಿಷಗಳ ನಡುವೆ ಸ್ಪಷ್ಟವಾದ ವ್ಯತ್ಯಾಸವನ್ನು ತೋರಿಸಲು ಪ್ರಾರಂಭಿಸಿದ ದಿನ ಎಲ್ಲವೂ ತಲೆಕೆಳಗಾಗಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.ಅಲ್ಲದೆ ಕಾಂಗ್ರೆಸ್ನಲ್ಲಿ ಯುವ ನಾಯಕರು ಸಾಕಷ್ಟು ಸ್ಥಾನವನ್ನು ಹೊಂದಿದ್ದಾರೆಂದು ಅವರು ಹೇಳಿದ್ದಾರೆ.ಮುಂದಿನ ದಿನಗಳಲ್ಲಿ ಕಿರಿವಯಸ್ಸಿನ ಯುವಕರಿಗೆ ಉನ್ನತ ಹುದ್ದೆಯ ಜವಾಬ್ದಾರಿಯುತ ಸ್ಥಾನಗಳನ್ನು ನೀಡಲಾಗುತ್ತದೆ ಎಂದರು. "ತಳಮಟ್ಟದಿಂದ ಪಕ್ಷದ ಸಿದ್ದಾಂತವನ್ನು ನಂಬಿ ಬಂದವರಿಗೆ  ಪ್ರಮುಖ ನಾಯಕತ್ವದ ಸ್ಥಾನಗಳಲ್ಲಿ ಅವಕಾಶ ಕಲ್ಪಿಸಲಾಗುವುದು " ಮುಂಬರುವ ರಾಜ್ಯಸಭೆ ಚುನಾವಣೆಗೆ ಪಕ್ಷ ಘೋಷಿಸಿದ 13 ಹೆಸರುಗಳಲ್ಲಿ ಸಾಕಷ್ಟು ಯುವ ನಾಯಕರಿದ್ದಾರೆ. ರಿಯಾಣ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, ರಾಜೀವ್ ಸತವ್, ಶಹಜಾದಾ ಅನ್ವರ್, ಕೆನಡಿ ಕಾರ್ನೆಲಿಯಸ್ ಖೈರಿಯಮ್ ಮತ್ತು ಫುಲೋ ದೇವಿ ನೇತಮ್ ಅವರ ಪುತ್ರ ದೀಪೇಂದರ್ ಹೂಡಾ  ಇದರಲ್ಲಿ ಪ್ರಮುಖರು. ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಸಿಂಧಿಯಾ ಅವರ ಸಿದ್ಧಾಂತವನ್ನು ಕಡೆಗಣಿಸಿದ್ದಾರೆ ಮತ್ತು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಅವರಿಗೆ ದುಗುಡವಿದೆ ಆದ ಕಾರಣ ಆರ್‌ಎಸ್‌ಎಸ್‌ನೊಂದಿಗೆ ಹೋಗಲು ನಿರ್ಧರಿಸಿಸಿದರೆಂದು ಹೇಳೀದ್ದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا