Urdu   /   English   /   Nawayathi

2 ಬಸ್, 15 ವಾಹನಗಳಿಗೆ ಅಪ್ಪಳಿಸಿದ ಟ್ಯಾಂಕರ್ : 32 ಮಂದಿ ಸಾವು

share with us

ಡಮಾಸ್ಕಸ್: 09 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ಇಂಧನ ಟ್ಯಾಂಕರ್, ಎರಡು ಬಸ್‍ಗಳು ಮತ್ತು 15 ಇತರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ 32ಕ್ಕೂ ಹೆಚ್ಚು ಮಂದಿ ಮೃತಪಟ್ಟ ದುರ್ಘಟನೆ ಸಿರಿಯಾ ರಾಜಧಾನಿ ಡಮಸ್ಕಸ್ ಬಳಿ ಸಂಭವಿಸಿದೆ. ಈ ಭೀಕರ ಅಪಘಾತದಲ್ಲಿ 77ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ಗೃಹ ಸಚಿವ ಮಹಮ್ಮದ್ ಖಾಲಿದ್ ಅಲ್-ರೆಹಮಾನ್ ತಿಳಿಸಿದ್ದಾರೆ. ಇಂಧನ ಟ್ಯಾಂಕರ್‍ನ ಬ್ರೇಕ್ ವಿಫಲಗೊಂಡು 15 ವಾಹನಗಳು ಮತ್ತು ಎರಡು ದೊಡ್ಡ ಬಸ್‍ಗಳಿಗೆ ಡಿಕ್ಕಿ ಹೊಡೆಯಿತು.ಈ ಬಸ್‍ಗಳಲ್ಲಿ ಹಲವು ಮಂದಿ ಇರಾಕಿ ಪ್ರಯಾಣಿಕರಿದ್ದರು. ಈ ದುರ್ಘಟನೆಯಲ್ಲಿ ಅನೇಕ ಕಾರುಗಳು ಮತ್ತು ಇತರ ವಾಹನಗಳಿಗೆ ಹಾನಿಯಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಕೆಲವರ ಸ್ಥಿತಿ ವಿಷಮವಾಗಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا