Urdu   /   English   /   Nawayathi

ಬಾಬ್ರಿ ಮಸೀದಿ ಧ್ವಂಸ ಪ್ರಕರಣ; ಸಿಬಿಐ ವಿಶೇಷ ಕೋರ್ಟ್ ನಿಂದ ತ್ವರಿತಗತಿಯ ವಿಚಾರಣೆ

share with us

ಲಕ್ನೋ: 08 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ರಾಮಜನ್ಮ ಭೂಮಿ ನಿವೇಶನ ವಿವಾದವನ್ನು ಇತ್ಯರ್ಥಪಡಿಸಿದ ಸುಪ್ರೀಂ ಕೋರ್ಟ್ ಆಯೋಧ್ಯೆ ರಾಮ ಮಂದಿರ ಪರವಾಗಿ ತೀರ್ಪು ಪ್ರಕಟಿಸಿದ ನಂತರ, ಈಗ ಎಲ್ಲರ ಕಣ್ಣು ಬಾಬ್ರಿ ಮಸೀದಿ ದ್ವಂಸ ಪ್ರಕರಣ ಸಂಬಂಧ ತ್ವರಿತ ವಿಚಾರಣೆಯ ಮೇಲೆ ನೆಟ್ಟಿದೆ. ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಸೂಚನೆಯ ನಂತರ ಪ್ರಕರಣವನ್ನು ಸಿಬಿಐ ವಿಶೇಷ  ನ್ಯಾಯಾಲಯ ಕೈಗೆತ್ತಿಕೊಂಡಿದ್ದು, ಪ್ರಕರಣದ 294ನೇ ಸಾಕ್ಷಿಯಾಗಿರುವ ಎಂ. ನಾರಾಯಣನ್ ಶುಕ್ರವಾರ ಹೇಳಿಕೆ ದಾಖಲಿಸಲು ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಈ ಪ್ರಕರಣದಲ್ಲಿ ಸಿಬಿಐ ಪರವಾಗಿ ನಾರಾಯಣನ್ ಕೊನೆಯ ಸಾಕ್ಷಿಯಾಗಿದ್ದಾರೆ. ಈ ಪ್ರಕರಣವನ್ನು 1992, ಡಿಸೆಂಬರ್6, ರಂದು ರಾಮಜನ್ಮಭೂಮಿ ಪೊಲೀಸ್ ಠಾಣೆಯ ಠಾಣಾಧಿಕಾರಿ, ರಾಮಜನ್ಮಭೂಮಿ ಚೌಕಿ ಉಸ್ತುವಾರಿ  ದಾಖಲಿಸಿದ್ದರು. ಸಿ ಆರ್ ಪಿ ಸಿ ಸೆಕ್ಷನ್ 313ರಡಿ 33 ಆರೋಪಿಗಳ ಹೇಳಿಕೆಯನ್ನು ವಿಶೇಷ ಸಿಬಿಐ ನ್ಯಾಯಧೀಶ ಎಸ್.ಕೆ.ಯಾದವ್   ದಾಖಲಿಸಿಕೊಳ್ಳುವುದನ್ನು  ಆರಂಭಿಸಿದ್ದಾರೆ. ಮಸೀದಿ ದ್ವಂಸ ಸಂಬಂಧ ದಾಖಲಾಗಿದ್ದ ಒಟ್ಟು 48ಎಫ್ ಐ ಆರ್ ಗಳ ಬಗ್ಗೆ ತನಿಖೆ ನಡೆಸಿದ ಸಿಬಿ- ಸಿಐಡಿ ನಂತರ ಅದನ್ನು ಸಿಬಿಐಗೆ ಹಸ್ತಾಂತರಿಸಿತ್ತು. ನಂತರ  ಮೇ 31, 2017ರ  ಮೇ ತಿಂಗಳಲ್ಲಿ ಸಿಬಿಐ 49 ಮಂದಿಯ ವಿರುದ್ದ  ದೋಷಾರೋಪಪಟ್ಟಿ ಸಲ್ಲಿಸಿತ್ತು ಈ ಪೈಕಿ 16 ಮಂದಿ ಮೃತಪಟ್ಟಿದ್ದಾರೆ. ಪ್ರಕರಣದ  ತೀರ್ಪನ್ನು ಒಂಬತ್ತು ತಿಂಗಳೊಳಗೆ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್ ಕಳೆದ ವರ್ಷ ತಾಕೀತು ಮಾಡಿರುವ ಹಿನ್ನಲೆಯಲ್ಲಿ ನ್ಯಾಯಾಲಯ 2020ರ ಅಂತ್ಯದ ವೇಳೆಗೆ ತೀರ್ಪು ಪ್ರಕಟಿಸುವ ನಿರೀಕ್ಷೆಯಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا