Urdu   /   English   /   Nawayathi

ರಾಜ್ಯ ಬಜೆಟ್‌ನಲ್ಲಿ ಕೊಡಗಿಗೆ ಇಲ್ಲ ಹೇಳಿಕೊಳ್ಳುವಂತಹ ಕೊಡುಗೆ... ಸ್ಥಳೀಯರ ಅಸಮಾಧಾನ

share with us

ಕೊಡಗು: 05 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ಕೊಡಗಿನ ಜನ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳನ್ನು ಹೊಂದಿದ್ದರು. ಬಜೆಟ್ ಪೂರ್ವದಲ್ಲೇ ಸ್ಥಳೀಯ ಶಾಸಕ ಕೆ.ಜಿ.ಬೋಪಯ್ಯ ಜಿಲ್ಲೆಗೆ ಹೆಚ್ಚಿನ ಅನುದಾನ ಕೊಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ ‘ವಿಶೇಷ ಪ್ಯಾಕೇಜ್’ಗೆ 100 ಕೋಟಿ, ಗೋಣಿಕೊಪ್ಪದಲ್ಲಿ ಹೊರಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ 1 ಕೋಟಿ, ಜಿಲ್ಲೆಯ ವಿವಿಧ ಜನಾಂಗಗಳು ನಡೆಸುತ್ತಿರುವ ಕ್ರೀಡಾಕೂಟಗಳಾದ ಹಾಕಿ, ಕ್ರಿಕೆಟ್ ಮುಂತಾದ ಕ್ರೀಡೆಗಳಿಗೆ 1 ಕೋಟಿ, ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ರೈಲ್ವೆ ಕಂಬಿ ಅಳವಡಿಕೆಗೆ 25 ಕೋಟಿ, ವಿವಿಧ ಜನಾಂಗಗಳಾದ ಕೊಡವ, ಅರೆಭಾಷೆ ಗೌಡ, ಒಕ್ಕಲಿಗ, ಬಿಲ್ಲವ, ಬಂಟ ಮತ್ತಿತರ ಹಿಂದುಳಿದ ಸಮುದಾಯ ಭವನಗಳ ಅಭಿವೃದ್ಧಿ ಮತ್ತು ನಿರ್ಮಾಣಕ್ಕೆ 15 ಕೋಟಿ, ಜಿಲ್ಲೆಯ ಬೆಳೆಗಾರರಿಗೆ 10 ಎಕರೆ ಒಳಪಟ್ಟಂತೆ 10 ಹೆಚ್.ಪಿ ವಿದ್ಯುತ್​​ಅನ್ನು ಉಚಿತವಾಗಿ ನೀಡುವಂತೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನತೆಯ ಎಲ್ಲಾ ನಿರೀಕ್ಷೆಗಳು ಹುಸಿಯಾಗಿದ್ದು, ಸ್ಥಳೀಯರು ರಾಜ್ಯ ಬಜೆಟ್ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا