Urdu   /   English   /   Nawayathi

ಮೂರು ವರ್ಷದ ಬಾಲಕನ ಹೊಟ್ಟೆಯಲ್ಲಿ 11 ಸೂಜಿ ಪತ್ತೆ... ವೈದ್ಯರಿಗೆ ಶಾಕ್​!

share with us

ಹೈದರಾಬಾದ್​: 05 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ಮೂರು ವರ್ಷದ ಬಾಲಕನೊಬ್ಬನ ಹೊಟ್ಟೆಯಲ್ಲಿ ಬರೋಬ್ಬರಿ 11 ಸೂಜಿಗಳು ಕಂಡು ಬಂದಿದ್ದು, ಇದನ್ನು ನೋಡಿರುವ ವೈದ್ಯರೇ ಶಾಕ್​ಗೆ ಒಳಗಾಗಿದ್ದಾರೆ. ಕಳೆದ ಐದು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಅಶೋಕ್​ ಹಾಗೂ ಅನ್ನಪೂರ್ಣ ದಂಪತಿ ಮಗುವನ್ನ ಆಸ್ಪತ್ರೆಗೆ ಕರೆದುಕೊಡು ಹೋಗಿದ್ದಾರೆ. ಈ ವೇಳೆ ಬಾಲಕನ ದೇಹ ಸ್ಕ್ಯಾನ್​ ಮಾಡಿದಾಗ ಕಿಡ್ನಿ, ಖಾಸಗಿ ಭಾಗಗಳಲ್ಲಿ ಸೂಜಿ ಕಂಡು ಬಂದಿವೆ. ಈಗಾಗಲೇ ಶಸ್ತ್ರಚಿಕಿತ್ಸೆ ಮಾಡಿಸಿ ಬಾಲಕನ ದೇಹದಲ್ಲಿದ್ದ ಕೆಲವೊಂದು ಸೂಜಿ ಹೊರತೆಗೆಯಲಾಗಿದ್ದು, ಆದರೆ ಕೆಲವೊಂದು ಸೂಜಿಗಳು ಸೂಕ್ಷ ಭಾಗಗಳಲ್ಲಿ ಸಿಲುಕಿಕೊಂಡಿರುವ ಕಾರಣ ಹೊರತೆಗೆಯಲು ಸಾಧ್ಯವಾಗುತ್ತಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಕುಟುಂಬದೊಂದಿಗೆ ಸರಿ ಇಲ್ಲದ ವ್ಯಕ್ತಿಗಳು ಮಗುವನ್ನ ತಮ್ಮೊಂದಿಗೆ ಕರೆದುಕೊಂಡು ಹೋಗಿ ಈ ರೀತಿಯ ಕೃತ್ಯವೆಸಗಿದ್ದು, ಈಗಾಗಲೇ ಇಬ್ಬರು ಶಂಕಿತ ವ್ಯಕ್ತಿಗಳನ್ನ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ತೆಲಂಗಾಣದ ಕೆಲವೊಂದು ಪ್ರದೇಶಗಳಲ್ಲಿ ಮಂತ್ರವಾದಿಗಳು ಸಹ ಇಂತಹ ಕೆಲಸ ಮಾಡುತ್ತಿದ್ದು, ಅವರ ಕೈವಾಡ ಇದರಲ್ಲಿ ಅಡಗಿರುವ ಶಂಕೆ ವ್ಯಕ್ತವಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا