Urdu   /   English   /   Nawayathi

'ಭಾರತ್​ ಮಾತಾ ಕೀ ಜೈ' ವಿಷಯವಾಗಿ ಮಾಜಿ ಪಿಎಂ ಸಿಂಗ್​ ಕಾಲೆಳೆದ ಪ್ರಧಾನಿ ಮೋದಿ!?

share with us

ನವದೆಹಲಿ: 04 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ಭಾರತ್​ ಮಾತಾ ಕೀ ಜೈ ಘೋಷಣೆ ಇದೀಗ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದ ಮಾಜಿ ಪ್ರಧಾನಿ ಡಾ.ಮನಮೋಹನ್​ ಸಿಂಗ್​​ ಆರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದು, ಅವರ ಹೆಸರು ಬಳಕೆ ಮಾಡದೇ ಈ ಟಾಂಗ್​ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಬಿಜೆಪಿ ಸಂಸದೀಯ ಸಭೆಯಲ್ಲಿ ಭಾಗಿಯಾಗಿದ್ದ ವೇಳೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಕೆಲವರು ಭಾರತ್​ ಮಾತಾ ಕೀ ಜೈ ಘೋಷಣೆ ಕೂಗಲು ಹಿಂದೆ ಮುಂದೆ ನೋಡುತ್ತಾರೆಂದು ಅವರ ಹೆಸರು ಉಲ್ಲೇಖ ಮಾಡದೇ ತಿರುಗೇಟು ನೀಡಿದ್ದಾರೆ. ದೇಶಭಕ್ತಿ ಹೆಚ್ಚಿಸುವ ಈ ಘೋಷಣೆ ಕೂಗಲು ಯಾಕೆ ಹಿಂದೇಟು ಹಾಕಬೇಕು ಎಂದು ಅವರು ಹೇಳಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಜವಾಹರಲಾಲ್ ನೆಹರೂ ಭಾಷಣ, ಬರಹ ಕುರಿತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದ ಡಾ. ಮನಮೋಹನ್​ ಸಿಂಗ್​​ ಕೆಲವೊಂದು ಸಂಘಟನೆಗಳು ಹಾಗೂ ಮುಖಂಡರು ತಮ್ಮ ಬೆಳೆ ಬೇಯಿಸಿಕೊಳ್ಳಲು ಈ ಘೋಷಣೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا